ಬರಹ-ಉಷಾಪ್ರೀತಮ್

“ಯುದ್ಧ ಮತ್ತು ಮಕ್ಕಳು” ಪ್ರಖ್ಯಾತ ಮನಃಶಾಸ್ತçಜ್ಞ ಸಿಗ್ಮಂಡ್ ಫ್ರಾಯ್ಡ್ ಮಗಳಾದ ಡೋರೋಥಿ ಬರ್ಲಿಗ್ ಹ್ಯಾಮ್ ಮತ್ತು ಅವಳ ಆತ್ಮೀಯರು ಸೇರಿ ಬರೆದ ಪುಸ್ತಕ. ನಾಜಿ ಜರ್ಮಿನಿಯ ಆಕ್ರಮಣಕ್ಕೆ ತುತ್ತಾದ ಇಂಗ್ಲೆAಡಿನ ಮಕ್ಕಳು ತಮ್ಮ ತಂದೆ-ತಾಯಿಯಿAದ ಅಗಲಿ ಅನಿವಾರ್ಯ ಸನ್ನಿವೇಶದಲ್ಲಿ ಹೇಗೆ ಬದುಕಿದರು ಎನ್ನುವ ಅಂಶಗಳನ್ನು ಹೇಳುವ ಪುಸ್ತಕ.

ಹೌದು, ಯುದ್ಧ ನಾವೂ ನೀವು ಹೇಳುವಷ್ಟು ಸುಲಭದ್ದಲ್ಲ. ಯಾವುದೋ ಒಂದು ದೇಶ ಮತ್ತೊಂದು ದೇಶದ ಮೇಲೆ ಆರ್ಥಿಕ, ರಾಜಕೀಯ, ಧಾರ್ಮಿಕ ಪ್ರತಿಕಾರಗಳಿಗಾಗಿ ಮಾಡುವ ಒಂದು ಪ್ರಕ್ರಿಯೆ ಅಂಥ ಕರೆಯುವುದಾದರೆ, ಯುದ್ಧದಲ್ಲಿ ತಮ್ಮದಲ್ಲದ ತಪ್ಪಿಗೆ ಅತ್ಯಂತ ಕೆಟ್ಟ ಅಂತ್ಯವನ್ನು ಕಾಣುವುದು ಏನು ಅರಿಯದ ಮುಗ್ಧ ಮಕ್ಕಳು.

ನಾವೂ ಈ ಜಗತ್ತು ಕಂಡ ಯುದ್ಧಗಳ ವಿಶ್ಲೇಷಣೆ, ಅಲ್ಲಾದ ಮಕ್ಕಳ ಮಾರಣಹೋಮದ ಬಗ್ಗೆ ಅರಿಯುವ ಮುನ್ನ. ನಾವೆಲ್ಲರೂ ಅನುಭವಿಸಿದ, ಅನುಭವಿಸುತ್ತಿರುವ ಈ ವೈರಸ್ ಯುದ್ಧವಿದೆ ಯಲ್ಲಾ ಇದೇ ಸಾಕು ತಮ್ಮದಲ್ಲದ ತಪ್ಪಿಗೆ ಮುಗ್ಧ ಮಕ್ಕಳು ಹೇಗೆ ಬಲಿಪಶುಯಾಗುತ್ತಾರೆ ಎಂದು ತಿಳಿಯಲು.

ನಮ್ಮ ತಪ್ಪೋ, ವ್ಯವಸ್ಥೆಯ ವೈಫಲ್ಯವೋ ಕೊರೊನಾ ಮಹಾಮಾರಿ ಸಮುದಾಯದ ಹಂತಕ್ಕೆ ಹರಡಿದಮೇಲೆ ದೇಶದಲ್ಲಿ ಅನೇಕ ತಾಯಿ ತಂದೆಯರು ಮುಗ್ಧ ಮಕ್ಕಳನ್ನು ಬಿಟ್ಟು ಅಸುನೀಗಿದರು, ಯಾವ ವೈರಸ್, ಹೇಗೆ ಸತ್ತರು, ಸಾವು ಎಂದರೇನು ಗೊತ್ತಿಲ್ಲದ ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡರು.

ಸರ್ಕಾರ ಆ ಮಕ್ಕಳ ದತ್ತು ತೆಗೆದುಕೊಳ್ಳಲು, ಅವರ ಪೋಷಣೆ ಮಾಡಲು ಅನೇಕ ಕ್ರಮ ವಹಿಸಿರಬಹುದು ಆದರೆ ಆ ಮಕ್ಕಳಿಗೆ ನಿಜವಾಗಿ ಅವರ ತಂದೆ ತಾಯಿಯಿಂದ ಸಿಗಬೇಕಾದ ಆ ಭವಿಷ್ಯ, ಆ ಪ್ರೀತಿ ಸಿಗಲು ಸಾಧ್ಯವೇ? ಇದು ಮುಗ್ಧಮಕ್ಕಳು ಏನು ಅರಿವಿಲ್ಲದೆ ಸಂಕಷ್ಟಕ್ಕೆ ಈಡಾದ ಕಥೆ.

ಹಾಗೇ ೨೦೧೫ ರಲ್ಲಿ ಸಿರಿಯಾ ಸಂಘರ್ಷದಲ್ಲಿ, ಸಿರಿಯಾ ದೇಶದ ಒಂದು ಪುಟ್ಟ ಮಗು ಸಮುದ್ರದ ಬಳಿ ಹೆಣವಾಗಿ ಬಿದ್ದಿದ್ದ ಫೋಟೋ ಇಂಟರ್‌ನೆಟ್‌ನ್ನಲ್ಲಿ ವೈರಲ್ ಆಗಿತ್ತು. ಅದನ್ನು ನೋಡಿದರೆ ಎಂಥ ಕಲ್ಲು ಹೃದಯವರ ಕಣ್ಣಂಚಲ್ಲೂ ನೀರು ಜಿನುಗದೆ ಇರುತ್ತಿರಲಿಲ್ಲ. ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಬೇಕಿದ್ದ ಮಗು ದೇಶದೊಳಗೆ ನಡೆದ ಸಂಘರ್ಷದಲ್ಲಿ ತಂದೆ-ತಾಯಿಯಿAದ ಬೇರಾಗಿ ಬಂದು ಅಲ್ಲಿ ಬಿದ್ದಿತ್ತು. ಒಂದು ಮಗುವಿನ ಸಾವು ನಮ್ಮ ಮನಸನ್ನು ಅಷ್ಟು ಕಲಕಿದರೆ ಅಂಥ ಮಿಲಿಯನ್‌ಗಟ್ಟಲೇ ಮಕ್ಕಳ ಜೀವವನ್ನು ಈ ಯುದ್ಧಗಳು ಹೊಸಕಿ ಹಾಕಿವೆ.

ಇದನ್ನು ಮನಗಂಡ ವಿಶ್ವಸಂಸ್ಥೆ ೧೯೮೨ ಆಗಸ್ಟ್ ತಿಂಗಳಿನ್ನಲ್ಲಿ ಜೂನ್ ನಾಲ್ಕನ್ನು ಮುಗ್ಧ ಮಕ್ಕಳ ಬಲಿಪಶುಗಳ ಅಂತಾರಾಷ್ಟಿçÃಯ ದಿನವನ್ನಾಗಿ ಆಚರಿಸಲಾರಂಭಿಸಿತು. ಸದಸ್ಯ ರಾಷ್ಟçಗಳು ಮಕ್ಕಳ ಮೇಲೆ ಸಶಸ್ತç ಸಂಘರ್ಷದ ಪ್ರಭಾವವದ ಮಹತ್ವವನ್ನು ಗುರುತಿಸಿದವು. ಮತ್ತು ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಮನಗಂಡವು. ಮಕ್ಕಳ ಹಕ್ಕುಗಳ ಕುರಿತು ನಿರ್ಣಯವನ್ನು ಅಂಗೀಕಾರ ಮಾಡಲಾಯಿತು. ಲೆಬನಾನ್ ನ್ನಲ್ಲಿ ನಡೆದ ಮಕ್ಕಳ ಮಾರಣಹೋಮ ಈ ದಿನಕ್ಕೆ ಪ್ರೇರಣೆಯಾಗಿತ್ತು.

ಈ ರೀತಿ ಯುದ್ಧಗಳಿಂದ ಜಗತ್ತಿನ್ನಲ್ಲಿ ಸುಮಾರು ೨೫೦ ದಶಲಕ್ಷ ಮಕ್ಕಳು ದುರ್ಬಲರಾಗಿದ್ದಾರೆ. ಆ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಸಂಕಟಗಳನ್ನು ಎತ್ತಿ ಹಿಡಿಯಲು ಏನಾದರೂ ಮಾಡಲೇಬೇಕು ಎಂದು ವಿಶ್ವಸಂಸ್ಥೆ ಯೋಚಿಸಿತು. ಈ ಮಹತ್ತರ ನಿರ್ಧಾರವನ್ನು ಮಾಡಿತು. ಸಾವು, ಲೈಂಗಿಕ ದೌರ್ಜನ್ಯ, ಅಪಹರಣ, ಮಾನವೀಯ ಪ್ರವೇಶವನ್ನು ನಿರಾಕರಿಸುವುದು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿ ಧಾಳಿ ಮಾಡುವುದು. ಇಂಥ ಸಂಘರ್ಷಗಳಲ್ಲಿ ಬಲಿಯಾಗುವ ಮಕ್ಕಳ ಸಂಕಟಗಳ ಬಗ್ಗೆ ಜಗತ್ತಿನ ಗಮನ ಸೆಳೆಯವುದು ವಿಶ್ವಸಂಸ್ಥೆಯ ಪ್ರಧಾನ ಗುರಿಯಾಗಿದೆ.

ಈಗ್ಗೇ ವರ್ಷಗಳ ಹಿಂದೆ ದೆಹಲಿಯ ಕಾಲೇಜೊಂದರ ವಿದ್ಯಾರ್ಥಿನಿ ಗುರ್ಮೇಹರ್ ಕೌರ್ ಳ ಒಂದು ಹೇಳಿಕೆಗೆ ರಾಜಕೀಯ ಮುಖಂಡರು, ಮಂತ್ರಿಗಳು, ಕ್ರಿಕೆಟ್ ಆಟಗಾರರು, ಟಿವಿ ಚಾನೆಲ್‌ಗಳು ಅವಳನ್ನು ಕೆಂಡಾಮAಡಲವಾಗಿ ಖಂಡಿಸಿದ್ದವು. ಆಕೆಯನ್ನು ಅತ್ಯಾಚಾರ ಮಾಡುವ ಬೆದರಿಕೆಯನ್ನು ಒಡ್ಡಲಾಗಿತ್ತು. ಅಷ್ಟಕ್ಕೂ ಆಕೆ ನಮ್ಮ ಯುದ್ಧೋನ್ಮಾದ ಮಾಧ್ಯಮಗಳಿಗಿಂತ ದೊಡ್ಡ ತಪ್ಪೇನಾದರೂ ಮಾಡಿದಳಾ ಎಂದು ಯೋಚಿಸಿದರೆ, ಯುದ್ಧ ಮತ್ತು ಶಾಂತಿ ಕುರಿತಾದ ವಿಚಾರಗೋಷ್ಠಿಯಲ್ಲಿ ಆಕೆ ಒಂದು ಭಿತ್ತಿಪತ್ರವನ್ನು ಕೈಯ್ಯಲ್ಲಿ ಹಿಡಿದಿದ್ದಳು ಅದು ಹೀಗಿತ್ತು“ ನನ್ನ ಅಪ್ಪನನ್ನು ಪಾಕಿಸ್ತಾನ ಕೊಲ್ಲಲಿಲ್ಲ. ಯುದ್ಧ ಕೊಂದಿತು. ಯುದ್ಧ ಯಾವ ದೇಶಕ್ಕೂ ಒಳಿತನ್ನು ಉಂಟು ಮಾಡುವುದಿಲ್ಲ ಎಂದು. ಏಕೆಂದರೆ ೧೯೯೯ರ ಕಾರ್ಗಿಲ್ ಯುದ್ಧದಲ್ಲಿ ಅವಳ ತಂದೆ ಮಡಿದಿದ್ದರು ಅವಳಾಗ ಎರಡು ವರ್ಷದ ಮಗುವಾಗಿದ್ದಳು.

ಯುದ್ಧ ಯಾವುದೇ ಕಾರಣಕ್ಕೂ ನಡೆದರೂ ಕೂಡಾ ಕೊನೆಗೆ ಅದು ಹುಟ್ಟು ಹಾಕುವುದು ಹಿಂಸೆಯನ್ನೆ. ಯಾವುದೇ ಸಮಾಜವಿರಬಹುದು ಅದರ ಸೃಷ್ಟಿ ಮತ್ತು ಸಮಾಜ ಉಳಿಯುವುದು, ಬಾಳುವುದು ಎಲ್ಲವೂ ಕೂಡಾ ಮಹಿಳೆ ಹಾಗೂ ಮಕ್ಕಳ ಮೇಲೆ ನಿಂತಿರುತ್ತದೆ. ಅತೀ ಚಿಕ್ಕ ವಯಸಿನ್ನಲ್ಲಿ ತನ್ನವರನ್ನು ಕಳೆದುಕೊಂಡು, ಭಯದ ವಾತವರಣದಲ್ಲಿ ಬೀಳುವ ಮಕ್ಕಳು ವಿಪರೀತ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಅವರಲ್ಲಿ ಮನುಷ್ಯ ಸಹಜವಾಗಿ ಅರಳಬೇಕಾದ ಭಾವನೆಗಳು ಉಗ್ರಸ್ವರೂಪ ಪಡೆಯುತ್ತಾ ಸಾಗುತ್ತವೆ.

ಇತ್ತೀಚೆಗೆ, ಕೈಯ್ಯಲ್ಲಿ ಮೊಬೈಲ್, ಅದರೊಳಗೆ ಫ್ರೀ ಡೇಟಾ ಇರುವ ಜನರಿಗೊಂದು ಹುಚ್ಚು ಹತ್ತಿದೆ. ಅದೇನೆಂದರೆ ಯಾವುದಾದರೂ ದೇಶದಲ್ಲಿ ಯುದ್ಧ ಶುರುವಾಯಿತೆಂದರೆ ಸಾಕು ಐ ಸ್ಟಾö್ಯಂಡ್ ವಿತ್ ಇದು, ಐ ಸ್ಟಾö್ಯಂಡ್ ವಿತ್ ಅದು ಅಂಥ ಸ್ಟೇಟಸ್ ಹಾಕಿಕೊಂಡು ಬೀಗುವುದು. ಯುದ್ಧವನ್ನೂ ಆಸ್ವಾದಿಸುವುದು ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಕುಳಿತು ಪಾಪ್‌ಕಾರ್ನ್ ತಿಂದ ಹಾಗಲ್ಲ. ಕಣ್ಣಿಗೆ ಕಾಣದ ಒಂದು ವೈರಸ್ ನಮ್ಮನ್ನು ಈ ಪರಿ ಹಿಂಡಿ ಹಿಪ್ಪೆ ಮಾಡುತ್ತಿದೆ ಎಂದರೆ, ಕಣ್ಣಿಗೆ, ಕಿವಿಗೆ ಎಲ್ಲಕ್ಕೂ ಕಾಣುವ ತುಪಾಕಿಗಳು, ಬಾಂಬ್ ಗಳು, ವೈಮಾನಿಕ ಧಾಳಿಗಳು ನಡೆಯುತ್ತಿದ್ದರೆ ಮಳೆ ಬಂದ ಹಾಗಿರುವುದಿಲ್ಲ ನೆನಪಿಡಿ.

ಯುದ್ಧ ಫಿಕ್ಸ್ ಅದು ನಮ್ಮದು..ಇದು ನಿಮ್ಮದು ಅಂಥ ಕೂತಲ್ಲೆ ಯುದ್ಧವನ್ನು ಆಹ್ವಾನವನ್ನು ಮಾಡುವವರು, ಯುದ್ಧ ಜಗತ್ತಿಗೆ ಕಲಿಸಿದ ಪಾಠಗಳನ್ನು ಒಮ್ಮೆ ತಿರುವಿ ಹಾಕಬೇಕು. ಮರೆತು ಹೋಗಿದ್ದರೆ ಮತ್ತೊಮ್ಮೆ ಇತಿಹಾಸ ಓದಬೇಕು. ಹಿರೋಶಿಮಾ, ನಾಗಸಾಕಿ ದುರಂತದಲ್ಲಿ ಮಡಿದವರ ಆರ್ತನಾದವನ್ನು ನಿಶ್ಯಬ್ಧ ಜಾಗದಲ್ಲಿ ಕುಳಿತು ಕಲ್ಪಿಸಿಕೊಳ್ಳಿ. ಇನ್ನಾದರೂ ಯುದ್ಧ ಎನ್ನುವ ಮೊದಲು ಜಗತ್ತಿನ ಪುಟಾಣಿ ದೇವತೆಗಳನ್ನು ನೆನೆಯೋಣ. ವಿಶ್ವಸಂಸ್ಥೆಯ ಈ ದಿನಾಚರಣೆ ಅಲ್ಲಿಗೆ ಸೀಮಿತವಾಗದೇ ಮನುಷ್ಯರೆನಿಸಿ ಕೊಂಡ ವರೆಲ್ಲರೂ ಯುದ್ಧಕ್ಕಿಂಥ ಸಾವಿರ ಬಾರಿ ಶಾಂತಿಯನ್ನೇ ಆಲೋಚಿ ಸೋಣ.