ಕೂಡಿಗೆ, ಮೇ ೩೧ : ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದ ಮುಖ್ಯ ರಸ್ತೆ ಮತ್ತು ಅದಕ್ಕೆ ಹೊಂದಿಕೊAಡAತಹ ಉಪ ರಸ್ತೆಯ ಕಾಮಗಾರಿಯು ಲೋಕೋಪಯೋಗಿ ಇಲಾಖೆ ವತಿಯಿಂದ ಆರಂಭಗೊAಡಿದೆ.
ಕಳೆದ ಒಂದು ವರ್ಷಗಳ ಹಿಂದೆ ಕಾಮಗಾರಿಯ ಭೂಮಿ ಪೂಜೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ನೆರವೇರಿಸಿದ್ದ ವಿವಿಧ ಕಾರಣದಿಂದಾಗಿ ಕಾಮಗಾರಿ ಯು ಸ್ಥಗಿತಗೊಂಡಿತ್ತು. ಇದೀಗ ಕ್ರಿಯಾಯೋಜನೆ ಅನುಮೋದನೆ ಗೊಂಡು ಒಂದು ಕೋಟಿ ವೆಚ್ಚದ ಮುಖ್ಯರಸ್ತೆ ಸೇರಿದಂತೆ ಉಪ ರಸ್ತೆಯ ಒಟ್ಟು ೮೦೦ ಮೀಟರ್ ಕಾಂಕ್ರೀಟ್ ರಸ್ತೆಯ ಕಾಮಗಾರಿ ಆರಂಭ ಗೊಂಡಿದೆ. ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ ಗುಣಮಟ್ಟದ ಕಾಂಕ್ರಿಟ್ ಹಾಕಿಸುವ ಕಾರ್ಯದಲ್ಲಿ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಇದ್ದು ಪರೀಕ್ಷಿಸಿ ಅದರ ಅನುಗುಣ ವಾಗಿ ರಸ್ತೆಗೆ ಕಾಂಕ್ರಿಟ್ ಹಾಕ ಲಾಗುತ್ತಿದೆ. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿ ಮತ್ತು ಹೋಬಳಿ ಮಟ್ಟದ ಅಧಿಕಾರಿ ವರ್ಗದವರು ಇದ್ದರು.