*ವೀರಾಜಪೇಟೆ : ಕೊರೊನಾ ಲಾಕ್‌ಡೌನ್ ಬಳಿಕ ಬಡಜನರಿಗೆ, ಕೂಲಿ ಕಾರ್ಮಿಕರಿಗೆ, ವೈರಸ್ ಸೋಂಕಿತರಿಗೆ ಬಹಳ ತೊಂದರೆಯಾಗಿರುವು ದನ್ನು ಮನಗಂಡ ಹೆಗ್ಗಳದ ಗೋಲ್ಡನ್ ರಾಕ್ಸ್ ಕಂಪೆನಿಯ ಮಾಲೀಕ ಸಾಜೇಶ್ ಭರತನ್ ಹಾಗೂ ಪೂಜಾ ದಂಪತಿಗಳು ಆಹಾರ ಕಿಟ್ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದು. ಕೊರೊನಾ ಎರಡನೇ ಅಲೆ ಆರಂಭ ಆದಾಗಿನಿಂದ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಕುಟುಂಬಕ್ಕೆ ೨೫ ಕೆ.ಜಿ. ಅಕ್ಕಿ, ಅಗತ್ಯ ವಸ್ತು ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಹೆಗ್ಗಳ, ಬೂದಿಮಾಳದ ಆಯ್ದ ಸುಮಾರು ನೂರು ಮಂದಿಗೆ ಒಂದು ತಿಂಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನೊಳಗೊಂಡ ಆಹಾರ ಕಿಟ್‌ಗಳನ್ನು ವಿತರಣೆ ಮಾಡಿದರು. ಬಿಜೆಪಿ ಉಪಾಧ್ಯಕ್ಷ ಅಚ್ಚಪಂಡ ಮಹೇಶ್ ಗಣಪತಿ, ಹೆಗ್ಗಳ ಗ್ರಾ. ಪಂ. ಅಧ್ಯಕ್ಷರು ಮತ್ತು ಸದಸ್ಯರು ಸಹಕಾರ ನೀಡಿದರು.ಕಡಂಗ : ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಆಧ್ಯಕ್ಷ ಅಂಕಿತ್ ಪೊನ್ನಪ್ಪ ಅವರ ನೇತೃತ್ವದಲ್ಲಿ ಗೋಣಿಕೊಪ್ಪಲು ನಗರದಲ್ಲಿ ಕೊರೊನಾ ಪಾಸಿಟಿವ್ ಸೋಂಕಿತರು ಇರುವ ೧೯ ಮನೆಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ. ನಗರದಲ್ಲಿ ಮತ್ತು ಆನೆಚೌಕೂರು ಚೆಕ್ ಪೋಸ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ತಂಪು ಪಾನಿಯ ಕಿಟ್, ಗೋಣಿಕೊಪ್ಪ ನಗರದಲ್ಲಿ ಕರ್ತವ್ಯ ನಿಮಿತ್ತ ಸಿಬ್ಬಂದಿಗಳಾದ ಪೊಲೀಸ್, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ, ಲಾರಿ ಚಾಲಕರಿಗೆ ಒಟ್ಟು ೫೦ ಜನರಿಗೆ ಮಧ್ಯಾಹ್ನದ ಆಹಾರ, ಪಾಸಿಟಿವ್ ಕುಟುಂಬಗಳಿಗೆ ತಮ್ಮ ಬಿ.ಪಿ.ಎಲ್ ಕಾರ್ಡ್ ಮೂಲಕ ನ್ಯಾಯಬೆಲೆ ಅಂಗಡಿಯಿAದ ಅವರ ರೇಷನ್ ಅನ್ನು ಅವರ ಮನೆಗೆ ತಲುಪಿಸಲಾಯಿತು. ೭-೮ ಸದಸ್ಯರು ಸೇರಿಕೊಂಡು ತಮ್ಮ ಸ್ವಂತ ಹಣದಿಂದ ಈ ಒಂದು ಲಾಕ್‌ಡೌನ್ ಸಂದರ್ಭದಲ್ಲಿ ಹೋಂ ಐಸೋಲೇಶನಲ್ಲಿ ಹಾಗೂ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ನಾಪೋಕ್ಲು : ಕೊಡಗು ಜಿಲ್ಲಾ ವಿಭಾಗೀಯ ಕೆನರಾ ಬ್ಯಾಂಕ್‌ನ ನಾಪೋಕ್ಲು ಶಾಖೆಯ ವತಿಯಿಂದ ಅಂಗವಿಕಲರಿಗೆ, ವಯೋವೃದ್ಧರಿಗೆ, ಬಡ ಕುಟುಂಬ ಗಳಿಗೆ, ಸೀಲ್‌ಡೌನ್ ಆಗಿರುವ ಮನೆ ಕುಟುಂಬಕ್ಕೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್‌ನ ಮ್ಯಾನೇಜರ್ ಪ್ರಶಾಂತ್ ಕುಮಾರ್, ಸಿಬ್ಬಂದಿಗಳಾದ ಸುನಿಲ್, ಮನು, ವಿಮಲ್, ಉಬೈದ್, ಪ್ರವೀಣ್, ಶರೀನ್, ದೇವಪ್ಪ, ಸುಧಾ ಇದ್ದರು.ಕೂಡಿಗೆ : ಕೂಡುಮಂಗಳೂರು ಗ್ರಾ. ಪಂ.ವ್ಯಾಪ್ತಿಯ ಆಶಾ ಕಾರ್ಯಕರ್ತೆ ಯರಿಗೆ, ಗ್ರಾ.ಪಂ. ಪೌರ ಕಾರ್ಮಿಕ ಸಿಬ್ಬಂದಿಗಳಿಗೆ ಅಳಿಲು ಸೇವಾ ತಂಡದ ಸದಸ್ಯರು ಕಿಟ್ ವಿತರಣೆ ಮಾಡಿದರು. ಗ್ರಾ.ಪಂ. ಸದಸ್ಯರುಗಳಾದ ಪ್ರಶಾಂತ್, ಸಂಗೀತ, ಅನೀತ, ಹರೀಶ್, ಅಭಿವೃದ್ಧಿ ಅಧಿಕಾರಿ ಸಂತೋಷ್‌ಕುಮಾರ್ ಇದ್ದರು.ಮಡಿಕೇರಿ : ಬೆಟ್ಟಗೇರಿ ಗ್ರಾ. ಪಂ. ಸದಸ್ಯ ಉಡೊತ್‌ಮೊಟ್ಟೆಯ ಬಿ.ಕೆ. ಗೋಪಾಲ ಪೂಜಾರಿ ಹೆರವನಾಡು ಗ್ರಾಮದ ಅಪ್ಪಂಗಳದ ಕೂಲಿ ಕಾರ್ಮಿಕರಿಗೆ ಕೋವಿಡ್-೧೯ರ ಮುನ್ನೆಚರಿಕಾಕ್ರಮವಾಗಿ ಮಾಸ್ಕ್, ಸ್ಯಾನಿಟೈಸರ್, ಔಷÀಧಿ ಹಾಲು, ಮೊಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸಿದರು. ಹಿಂದೂ ಜಾಗರಣಾ ವೇದಿಕೆಯ ಬೆಟ್ಟಗೇರಿ ವಲಯದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಸ. ಹಿ. ಪ್ರಾ. ಶಾಲೆಯ ಅಧ್ಯಕ್ಷ ಎಂ. ಜನಾರ್ಧನ, ಆರೋಗ್ಯ ಕಾರ್ಯಕರ್ತೆ ಕೃತಿಕರಾಣಿ, ಅಂಗನವಾಡಿ ಕಾರ್ಯಕರ್ತೆ ಜಯಂತಿ ಎಂ.ಎಸ್., ಆಶಾ ಕಾರ್ಯಕರ್ತೆ ದಿವ್ಯ ಎಂ. ಹಾಜರಿದ್ದರು.ಕುಶಾಲನಗರ : ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದಾನಿಗಳ ಸಹಕಾರದೊಂದಿಗೆ ಪಟ್ಟಣದ ಸದಸ್ಯರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ತಾಲೂಕಿನ ೧೫ ಸದಸ್ಯರಿಗೆ ಸಂಘದ ಪದಾಧಿಕಾರಿಗಳು, ಗಣ್ಯರು, ದಾನಿಗಳು ಕಿಟ್ ವಿತರಣೆ ಮಾಡಿದರು. ಕೊರೊನಾ ಲಾಕ್‌ಡೌನ್ ಹಿನ್ನೆಲೆ ದಾನಿಗಳಾದ ಹಿರಿಯ ವಕೀಲರಾದ ಈಶ್ವರ ಚಂದ್ರ ಸಾಗರ್, ಪವನ್ ಸಾಗರ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹರೀಶ್ ಕುಮಾರ್, ಸಂಘದ ರಾಷ್ಟಿçಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್ ಅವರ ಸಹಕಾರದೊಂದಿಗೆ ನೀಡಲಾದ ಆಹಾರ ವಸ್ತುಗಳ ಕಿಟ್ ಅನ್ನು ಸೋಮವಾರ ಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜು, ಸಿದ್ಧಲಿಂಗಪುರದ ಶಂಭುನಾಥ ಸ್ವಾಮೀಜಿ ಅವರುಗಳು ಕುಶಾಲನಗರದಲ್ಲಿ ವಿತರಿಸಿದರು. ಜಿಲ್ಲಾ ಪತ್ರಕರ್ತರ ಸಂಘ ದಿಂದ ನೀಡಿರುವ ಮಾಸ್ಕ್, ಸ್ಯಾನಿಟೈಸರ್ ಮತ್ತು ಪತ್ರಕರ್ತರ ಗುರುತಿನ ಚೀಟಿ ಕೂಡ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು. ಮಾತನಾಡಿದ ದಾನಿ ಪವನ್ ಸಾಗರ್ ಪತ್ರಕರ್ತರು ದಿನದ ೨೪ ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದ್ದು, ಎಚ್ಚರ ವಹಿಸಬೇಕೆಂದು ಕಿವಿಮಾತು ಹೇಳಿದರು ಸಿದ್ದಲಿಂಗಪುರದ ಶ್ರೀ ಶಂಭುನಾಥ ಸ್ವಾಮಿಜಿ ಅವರು ಆರ್ಶಿವಚನ ನೀಡಿ ಶುಭ ಹಾರೈಸಿದರು. ಪತ್ರಕರ್ತರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ತಹಶೀಲ್ದಾರ್ ಗೋವಿಂದ ರಾಜ್ ಭರವಸೆ ನೀಡಿದರು. ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಪ್ರಮುಖರಾದ ವಿಶ್ವ ಕುಂಬೂರು, ಡಿ.ಪಿ. ಲೋಕೇಶ್ ಸೇರಿದಂತೆ ಕುಶಾಲನಗರದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಇದ್ದರು.