ಮಡಿಕೇರಿ, ಮೇ ೩೧: ರಾಜ್ಯದಲ್ಲಿ ಜೂನ್ ೭ರ ವರೆಗೆ ವಿಧಿಸಿರುವ ಲಾಕ್ಡೌನ್ ಅನ್ನು ಜೂನ್ ಅಂತ್ಯದವರೆಗೂ ವಿಸ್ತರಿಸುವಂತೆ ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ರಮೇಶ್ ಹೊಳ್ಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ಡೌನ್ ಹೇರಿದ್ದು, ಅಗತ್ಯ ವಸ್ತುಗಳ ಖರೀದಿಗೆ ನಿಗದಿಗೊಳಿಸಿರುವ ಸಮಯವನ್ನು ಬೆಳಿಗ್ಗೆ ೮ ರಿಂದ ೧೨ ಗಂಟೆಯವರೆಗೆ ಅವಕಾಶ ಮಾಡಿಕೊಟ್ಟಲ್ಲಿ ಗ್ರಾಮೀಣ ಭಾಗಗಳಿಂದ ಬರುವ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಿ, ಬ್ಯಾಂಕ್ ವ್ಯವಹಾರವಿದ್ದಲ್ಲಿ ಮುಗಿಸಿ ಹಿಂತಿರುಗಲು ಅನುಕೂಲವಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ವಾರದ ಮೂರು ದಿನಗಳ ನಿಗದಿತ ಸಮಯವನ್ನು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿ
ದರು.