ಕುಶಾಲನಗರ, ಮೇ ೩೧: ಕೂಡಿಗೆ ಕುಶಾಲನಗರ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರವೊಂದನ್ನು ಸ್ಥಳೀಯ ಪೊಲೀಸ್ ಸಿಬ್ಬಂದಿ ಅದರ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಕುಶಾಲನಗರ ಮೆಡಿಕಲ್ ಶಾಪ್ ಮಾಲೀಕ ವಿನೋದ್ ಕುಮಾರ್ ಎಂಬವರು ಕೂಡಿಗೆ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ತನ್ನ ಕತ್ತಿನಲ್ಲಿದ್ದ ಸರ ಕಳೆದುಕೊಂಡು ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಸಿದ್ದಾರ್ಥ ಅವರಿಗೆ ದಾರಿಯಲ್ಲಿ ಸಿಕ್ಕಿದ ಚಿನ್ನದ ಖಚಿತ ಮಾಹಿತಿ ಪಡೆದು ಸರವನ್ನು ವಿನೋದ್ ಅವರಿಗೆ ಹಸ್ತಾಂತರಿಸಿದರು.