ಮಡಿಕೇರಿ, ಜೂ. ೧ : ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಶುಕ್ರವಾರ ಸುಸಜ್ಜಿತ ಆ್ಯಂಬ್ಯುಲೆನ್ಸ್ ಒಂದು ಕೊಡುಗೆಯಾಗಿ ದೊರಕುತ್ತಿದೆ. ವೆಂಟಿಲೇಟರ್, ಆಕ್ಸಿಜನ್ ಕಿಟ್., ಎಸಿ ಸೇರಿದಂತೆ ಸುಸಜ್ಜಿತ ವ್ಯವಸ್ಥೆಯುಳ್ಳ ಆ್ಯಂಬ್ಯುಲೆನ್ಸ್ ಇದಾಗಲಿದೆ. ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಅವರ ಕೋರಿಕೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಡಿ ಆರ್ ಎನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ನಾಯಕ್ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಈ ಆ್ಯಂಬ್ಯುಲೆನ್ಸ್ ಕೊಡುಗೆಯಾಗಿ ನೀಡಲಿದ್ದಾರೆ.