ಗೋಣಿಕೊಪ್ಪಲು, ಜೂ.೧: ತಾನೊಬ್ಬ ಇಲಾಖಾ ನೌಕರ ಎಂಬುದನ್ನು ಮನಗಾಣದೇ, ತನ್ನದೇ ಸಂಸ್ಥೆಯ ಅಧಿಕಾರಿಗಳ ಹಾಗೂ ವೈದ್ಯರ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿ ತಾನು ಕರೆ ತರುವ ವ್ಯಕ್ತಿಗಳಿಗೆ ಕೂಡಲೇ ಕೊರೊನಾ ಲಸಿಕೆ ನೀಡುವಂತೆ ಒತ್ತಾಯಿಸುತ್ತಿದ್ದ (ಮೊದಲ ಪುಟದಿಂದ) ೨ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈತ ಇಲ್ಲಿನ ಅಧಿಕಾರಿಗಳಿಗೆ, ಹಿರಿಯ ಸಿಬ್ಬಂದಿಗಳಿಗೆ ಏಕ ವಚನದಲ್ಲಿ ಸಂಬೋಧಿಸುವುದು ಹಾಗೂ ತಾನು ಕರೆತರುವ ವ್ಯಕ್ತಿಗಳಿಗೆ ತಕ್ಷಣವೇ ಚಿಕಿತ್ಸೆ, ಕೊರೊನಾ ಲಸಿಕೆ ನೀಡುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದ.

ಆರAಭದ ದಿನಗಳಲ್ಲಿ ತಮ್ಮದೇ ಸಿಬ್ಬಂದಿ ಎಂದು ಹಿರಿಯ ಸಿಬ್ಬಂದಿಗಳು ಸುಮ್ಮನಾಗಿ ಈತ ಕರೆದುಕೊಂಡು ಬರುವ ವ್ಯಕ್ತಿಗಳಿಗೆ ಕೊರೊನಾ ಲಸಿಕೆ ನೀಡುತ್ತಿದ್ದರು.

ಆದರೆ ದಿನ ಕಳೆದಂತೆ ಈತ ತನಗೆ ಬೇಕಾದ ಸ್ಥಳೀಯ ವ್ಯಕ್ತಿಗಳನ್ನು ಕರೆತರುವುದು ಲಸಿಕೆ ನೀಡುವಂತೆ ಒತ್ತಾಯಿಸುವುದು ಮಾಡಲಾರಂಭಿಸಿದ, ಇದನ್ನು ಪ್ರಶ್ನೆ ಮಾಡಿದರೆ, ಸ್ಥಳೀಯ ಕಾಫಿ ಬೆಳೆಗಾರರ ಬಳಿ ತೆರಳಿ ಇತರ ಸಿಬ್ಬಂದಿಗಳ ಮೇಲೆ ಇಲ್ಲದ ಆರೋಪ ಮಾಡುವುದಲ್ಲದೇ, ಅವರನ್ನು ಆಸ್ಪತ್ರೆಗೆ ಕರೆಸುವುದಾಗಿ ಬೆದರಿಕೆ ಹಾಕುತ್ತಿದ್ದ.

ಈತನ ಮಾತಿನಿಂದ ಅಸಮಾಧಾನಗೊಂಡ ಹಿರಿಯ ಅಧಿಕಾರಿಗಳು ಕೊರೊನಾ ಲಸಿಕೆ ನೀಡಲು ಸರ್ಕಾರದ ನಿಯಮಾವಳಿ ಇದೆ.ಅದನ್ನು ಮೀರಿ ನೀನು ಕರೆತರುವ ವ್ಯಕ್ತಿಗಳಿಗೆ ಕೂಡಲೇ ಲಸಿಕೆ ನೀಡಲು ಸಾಧ್ಯವಿಲ್ಲ. ಮೊದಲು ಬಂದವರಿಗೆ ಆದ್ಯತೆ ನೀಡಬೇಕು ಎಂದು ಸಮಜಾಯಿಷಿ ನೀಡಿದರು. ಇವರ ಉತ್ತರದಿಂದ ಆಕ್ರೋಶಗೊಂಡ ಆ್ಯಂಬ್ಯುಲೆನ್ಸ್ ಚಾಲಕ ಅಧಿಕಾರಿಗಳ ಮೇಲೆ ಕೈ ಮಾಡುವ ಪ್ರಯತ್ನ ಮಾಡಿದ್ದಾನೆ. ಇದರಿಂದಾಗಿ ಹಿರಿಯ ಅಧಿಕಾರಿ ಸ್ಥಳೀಯ ಪೊಲೀಸರನ್ನು ಕರೆಸುವ ಮಟ್ಟಿಗೆ ಗಲಾಟೆ ನಡೆದಿದೆ.

ಉಳಿದ ಸಿಬ್ಬಂದಿಗಳು ಆ್ಯಂಬ್ಯುಲೆನ್ಸ್ ಚಾಲಕನ ಕಾರ್ಯವೈಖರಿ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ಪರಿಸ್ಥಿತಿ ಶಾಂತವಾಯಿತು.

ಈತನ ನಡವಳಿ ಬಗ್ಗೆ ತಿತಿಮತಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಪ್ರಸ್ತಾಪ ಗೊಂಡಿದೆ. ಸಭೆಯಲ್ಲಿದ್ದ ಶಾಸಕ ಕೆ.ಜಿ.ಬೋಪಯ್ಯ ತಾಲೂಕು ವೈದ್ಯಾದಿಕಾರಿಗಳಾದ ಡಾ.ಯತೀರಾಜ್ ಹಾಗೂ ತಹಶಿಲ್ದಾರ್ ಯೋಗಾನಂದ್‌ರವರಿಗೆ ಈತನ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.