ಮಡಿಕೇರಿ, ಜೂ. ೧: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಮಂಗಳವಾರ ನಗರದ ವಿವಿಧ ಕಡೆಯ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಡಿಕೇರಿಯ ಟೌನ್‌ಹಾಲ್‌ನಲ್ಲಿ ಫ್ರಂಟ್‌ಲೈನ್ ವಾರಿರ‍್ಸ್ಗಳಿಗೆ ನೀಡಲಾಗುತ್ತಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸಿಬ್ಬಂದಿಗಳು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸುನಿಲ್ ಸುಬ್ರಮಣಿ ಚರ್ಚಿಸಿದರು.ಸಂತ ಮೈಕಲರ ಶಾಲೆಯಲ್ಲಿನ ಕೋವಿಡ್-೧೯ ರ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.