ಮಡಿಕೇರಿ, ಜೂ.೧: ಮಳೆಗಾಲದಲ್ಲಿ ಪ್ರವಾಹಕ್ಕೆ ಸಿಲುಕುವ ನಗರದ ಕಾವೇರಿ ಬಡಾವಣೆ ಹಾಗೂ ಟಿ. ಜಾನ್ ಲೇಔಟ್ ವ್ಯಾಪ್ತಿಯ ತೋಡುಗಳನ್ನು ನಗರಸಭೆ ವತಿಯಿಂದ ಶುಚಿಗೊಳಿಸಲಾಯಿತು. ತೋಡಿನಲ್ಲಿ ತುಂಬಿದ್ದ ಹೂಳು, ತ್ಯಾಜ್ಯವನ್ನು ಜೆಸಿಬಿ ಮೂಲಕ ಹೊರತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು. ನಗರಸಭಾ ಸದಸ್ಯ ಮಹೇಶ್ ಜೈನಿ ಖುದ್ದು ಸ್ಥಳದಲ್ಲಿದ್ದು, ಸಮರ್ಪಕವಾಗಿ ಕೆಲಸ ಮಾಡಿಸಿದರು. ಮುಂದಿನ ಮಳೆಗಾಲಕ್ಕೆ ಸಮಸ್ಯೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಮುಂಜಾಗ್ರತೆಯಾಗಿ ಶುಚಿತ್ವ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ಮಹೇಶ್ ಜೈನಿ ತಿಳಿಸಿದರು.