ಮಡಿಕೇರಿ, ಜೂ ೧ : ಕೊಡಗು ಜಿಲ್ಲೆಯಲ್ಲಿರುವ ಯುವಕ ಹಾಗೂ ಯುವತಿ ಸಂಘಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡುವ ಸೌಲಭ್ಯಗಳನ್ನು ಹಾಗೂ ಅನುದಾನಗಳನ್ನು ಪಡೆದುಕೊಳ್ಳಲು ಸರ್ಕಾರದ ನಿಯಮದಂತೆ ಸಂಘಗಳ ಜಿಲ್ಲಾ ನೋಂದಾವಣಿ ಕಚೇರಿಯಲ್ಲಿ ಯುವಕ ಅಥವಾ ಯುವತಿ ಸಂಘವನ್ನು ನೋಂದಾಯಿಸಿ ಅಲ್ಲಿನ ನೋಂದಾಯಿತ ಪ್ರತಿಯೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿಯ ಕಚೇರಿಯಲ್ಲಿ ತುರ್ತಾಗಿ ಸಕಾಲದಲ್ಲಿ ಸಂಘಗಳ ನೋಂದಣಿ ಮಾಡಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.

ಕೊಡಗು ಜಿಲ್ಲೆಯಲ್ಲಿರುವ ಕ್ರೀಡಾಪಟುಗಳು ಹಾಗೂ ತರಬೇತುದಾರರು ಕೋವಿಡ್-೧೯ ಗೆ ಸಂಬAಧಿಸಿದAತೆ ಕೋವಿಡ್ ಲಸಿಕೆ ಪಡೆದುಕೊಂಡಿದ್ದರೆ, ಅಂತಹ ಕ್ರೀಡಾಪಟುಗಳು ಹಾಗೂ ತರಬೇತುದಾರರು ಈ ಕಚೇರಿಗೆ ತುರ್ತಾಗಿ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಕ್ರೀಡೆ ಹಾಗೂ ಕ್ರೀಡೆಯಲ್ಲಿ ಭಾಗವಹಿಸಿದ ವಿವರ, ಆಧಾರ್ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆಯ ವಿವರಗಳನ್ನೊಳಗೊಂಡ ಮಾಹಿತಿಯನ್ನು ೦೮೨೭೨-೨೨೮೯೮೫ ಗೆ ಕರೆ ಮಾಡಿ ನೀಡಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಕೋರಿದ್ದಾರೆ.