ಭಾಗಮಂಡಲ, ಜೂ. ೧ : ಮಳೆಗಾಲ ಪ್ರಾರಂಭವಾಗುವ ಮುನ್ನವೇ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ತಿಂಗಳೇ ಜಿಲ್ಲೆಗೆ ಆಗಮಿಸಿರುವ ಎನ್.ಡಿ.ಆರ್.ಎಫ್ ತಂಡ ಇಂದು ತಲಕಾವೇರಿ, ಭಾಗಮಂಡಲ, ಚೇರಂಗಾಲಕ್ಕೆ ತೆರಳಿ ಪರಿಶೀಲನೆ ನಡೆಸಿತು. ಕಳೆದ ವರ್ಷದ ಆಗಸ್ಟ್ನಲ್ಲಿ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತ ಸ್ಥಳಕೆ ಮೊದಲು ತೆರಳಿದ ತಂಡ ನಂತರ ಬ್ರಹ್ಮಗಿರಿ ಬೆಟ್ಟಕ್ಕೂ ತೆರಳಿತು. ಬೆಟ್ಟದಲ್ಲಿ ಹಲವೆಡೆ ಬಿರುಕು ಬಿಟ್ಟಿರುವ ಜಾಗಗಳನ್ನು ತಂಡದ ಮುಖ್ಯಸ್ಥ ಬಬ್ಲು ಬಿಸ್‌ವಾಸ್ ಅವರ ಮಾರ್ಗದರ್ಶನದಲ್ಲಿ ಪರಿಶೀಲನೆ ನಡೆಸಿತು. ಇದರ ನಂತರ ಚೇರಂಗಾಲದ ಕೋಳಿಕಾಡಿನಲ್ಲಿ ಕಳೆದ ವರ್ಷ ಭೂಕುಸಿತಕ್ಕೊಳಗಾದ ಜನವಸತಿ ಪ್ರದೇಶಗಳಿಗೆ ತೆರಳಿದ ಎನ್.ಡಿ.ಆರ್.ಎಫ್. ತಂಡ ಅಪಾಯ ಪ್ರದೇಶದಲ್ಲಿರುವ ಒಂದು ಮನೆಯ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವAತೆ ನೋಟೀಸ್ ನೀಡುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿತು. ಪರಿಶೀಲನೆ ಸಂದರ್ಭ ಭಾಗಮಂಡಲ ಕಂದಾಯ ಪರಿವೀಕ್ಷಕ ಸದಾಶಿವ್, ಗ್ರಾಮ ಲೆಕ್ಕಾಧಿಕಾರಿ ಶರ್ಮಿಳಾ, ಪಿ.ಡಿ.ಈ. ನಂದಕುಮಾರ್ ಹಾಗೂ ಎ.ಎಸ್.ಐ ಬೆಳ್ಯಪ್ಪ ಅವರು ಹಾಜರಿದ್ದರು.