ಸಿದ್ದಾಪುರ, ಮೇ ೩೧: ಕಾಡಾನೆ ದಾಳಿಗೆ ಸಿಲುಕಿ ಕಾವಲುಗಾರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಸೋಮವಾರದಂದು ಬೆಳಿಗ್ಗೆ ಸಂಭವಿಸಿದೆ. ಕರಡಿಗೋಡು ಗ್ರಾಮದ ಇವಾಲ್ಸ್ ಬ್ಯಾಕ್ (ಆರೆಂಜ್ಕೌAಟಿ) ಸಂಸ್ಥೆಯಲ್ಲಿ ಕಾವಲುಗಾರನಾಗಿರುವ ಮೂಲತಃ ಪಶ್ಚಿಮಬಂಗಾಳ ನಿವಾಸಿ ಪೌಲೋಸ್ (ಪೌಲ್) (೩೪) ಎಂಬವರೇ ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿರುವ ವ್ಯಕ್ತಿ.
ಪೌಲೋಸ್ ರಾತ್ರಿ ಪಾಳಿಯದಲ್ಲಿ ಕೆಲಸ ಮುಗಿಸಿಕೊಂಡು ಬೆಳಿಗ್ಗೆ ತನ್ನ ವಸತಿಗೃಹಕ್ಕೆ ಕಾಲ್ನಡಿಯಲ್ಲಿ ಬರುತ್ತಿರುವ ಸಂದರ್ಭದಲ್ಲಿ ಏಕಾಏಕಿ ಕಾಡಾನೆಯೊಂದು ಕಾಫಿ ತೋಟದಿಂದ ದಾಳಿ ನಡೆಸಿದೆ. ಕಾಡಾನೆಯು ತನ್ನ ಸೊಂಡಿಲಿನಿAದ ಪೌಲೋಸ್ ಅನ್ನು ಎತ್ತಿ ಎಸೆದ ಪರಿಣಾಮ ತಲೆ, ಕಾಲಿಗೆ, ಮುಖದ ಭಾಗಕ್ಕೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿವೆ.
ಈ ಸಂದರ್ಭದಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಮತ್ತೋರ್ವರು ಈ ಘಟನೆಯಿಂದ ಭಯಗೊಂಡರು. ನಂತರ ಅಕ್ಕಪಕ್ಕದವರನ್ನು ಕರೆದು ಕಾಡಾನೆ ದಾಳಿಯಿಂದ ಗಾಯಗೊಂಡು ಒದ್ದಾಡುತ್ತಿದ್ದ ಪೌಲೋಸ್ ಅವರಿಗೆ ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಪೌಲೋಸ್ ರಾತ್ರಿ ಪಾಳಿಯದಲ್ಲಿ ಕೆಲಸ ಮುಗಿಸಿಕೊಂಡು ಬೆಳಿಗ್ಗೆ ತನ್ನ ವಸತಿಗೃಹಕ್ಕೆ ಕಾಲ್ನಡಿಯಲ್ಲಿ ಬರುತ್ತಿರುವ ಸಂದರ್ಭದಲ್ಲಿ ಏಕಾಏಕಿ ಕಾಡಾನೆಯೊಂದು ಕಾಫಿ ತೋಟದಿಂದ ದಾಳಿ ನಡೆಸಿದೆ. ಕಾಡಾನೆಯು ತನ್ನ ಸೊಂಡಿಲಿನಿAದ ಪೌಲೋಸ್ ಅನ್ನು ಎತ್ತಿ ಎಸೆದ ಪರಿಣಾಮ ತಲೆ, ಕಾಲಿಗೆ, ಮುಖದ ಭಾಗಕ್ಕೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿವೆ.
ಈ ಸಂದರ್ಭದಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಮತ್ತೋರ್ವರು ಈ ಘಟನೆಯಿಂದ ಭಯಗೊಂಡರು. ನಂತರ ಅಕ್ಕಪಕ್ಕದವರನ್ನು ಕರೆದು ಕಾಡಾನೆ ದಾಳಿಯಿಂದ ಗಾಯಗೊಂಡು ಒದ್ದಾಡುತ್ತಿದ್ದ ಪೌಲೋಸ್ ಅವರಿಗೆ ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.