ವೀರಾಜಪೇಟೆ, ಮೇ ೩೧: ಕೋವಿಡ್ -೧೯ ಮಾರ್ಗಸೂಚಿಯನ್ನು ಉಲ್ಲಂಘಿಸಿ ದೇವಾಲಯದಲ್ಲಿ ಸಾಮೂಹಿಕ ಭೋಜನಕ್ಕೆ ವ್ಯವಸ್ಥೆ ಮಾಡುತ್ತಿದ್ದ ಆರೋಪದ ಮೇರೆ ಕೊರೊನಾ ಫೈಯಿಂಗ್ ಸ್ಕಾ÷್ವಡ್ ತಂಡ ಇಲ್ಲಿನ ತೆಲುಗರ ಬೀದಿಯ ಮಧುರೈವೀರನ್ ದೇವಸ್ಥಾನದ ಆಡಳಿತ ಮಂಡಳಿಯ ಎಸ್.ಕೆ.ದಿನೇಶ್, ಟಿ.ಪಿ.ಅಂಗಮುತ್ತು, ಟಿ.ಪಿ.ನಾಗೇಂದ್ರ, ಟಿ.ಜೆ.ದಿವಾಕರ್, ಹಾಗೂ ಟಿ.ಎ.ಮುರುಗೇಶ್ ವಿರುದ್ಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ನಿನ್ನೆ ದಿನ ಫೈಯಿಂಗ್ ಸ್ಕಾ÷್ವಡ್ಗೆ ದೊರೆತ ಸುಳಿವಿನ ಮೇರೆ ತಂಡ ದೇವಸ್ಥಾನಕ್ಕೆ
(ಮೊದಲ ಪುಟದಿಂದ) ತೆರಳಿ ಪರಿಶೀಲಿಸಿದಾಗ ಸಾರ್ವಜನಿಕವಾಗಿ ಭೋಜನ ವ್ಯವಸ್ಥೆ ಮಾಡುತ್ತಿದ್ದುದು ಕಂಡುಬAದ ನಂತರ ಸ್ಥಳದಲ್ಲೇ ಇದ್ದ ೫ ಮಂದಿಯನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗಿದೆ. ದೇವಾಲಯದಲ್ಲಿ ಭೋಜನದ ಸಿದ್ಧತೆಯನ್ನು ತಂಡ ಪರಿಶೀಲಿಸಿದೆ. ದಾಳಿಯ ಸಮಯದಲ್ಲಿ ದೇವಸ್ಥಾನದಲ್ಲಿ ಪುರುಷರು, ಮಹಿಳೆಯರು ಹಾಗೂ ಕೆಲವು ಮಕ್ಕಳಿರುವುದು ತಂಡಕ್ಕೆ ಪತ್ತೆಯಾಗಿದೆ.
ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ತಂಡ ಇಲ್ಲಿನ ನಗರ ಪೊಲೀಸರ ವಶಕ್ಕೆ ನೀಡಿದೆ. ತಾಲೂಕು ತಹಶೀಲ್ದಾರ್ ಯೋಗಾನಂದ್ ಅವರ ಮಾರ್ಗದರ್ಶನದಲ್ಲಿ ಫೈಯಿಂಗ್ ಸ್ಕಾ÷್ವಡ್ನ ಪ್ರದೀಪ್ ಕುಮಾರ್, ನಾಣಯ್ಯ, ಲವಕುಮಾರ್ ದಾಳಿಯಲ್ಲಿ ಭಾಗವಹಿಸಿದ್ದರು.