ಮಡಿಕೇರಿ, ಜೂ.೧: ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ೧೮ ರಿಂದ ೪೪ ವರ್ಷದೊಳಗಿನ ರಾಜ್ಯ, ರಾಷ್ಟç ಹಾಗೂ ಅಂತರ್ರಾಷ್ಟಿçÃಯ ಮಟ್ಟದ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಕೋವಿಡ್-೧೯ ಗೆ ಸಂಬAಧಿಸಿದAತೆ ಕೋವಿಡ್ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ೧೮ ರಿಂದ ೪೪ ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ರಾಜ್ಯ, ರಾಷ್ಟç ಹಾಗೂ ಅಂತರ್ ರಾಷ್ಟಿçÃಯ ಮಟ್ಟದ ಸಾಧನೆ ಮಾಡಿದಲ್ಲಿ ಅಂತವರು ಈ ಲಸಿಕೆಯನ್ನು ಹಾಕಿಸಿಕೊಳ್ಳುವ ಪ್ರಯೋಜನ ಪಡೆದುಕೊಳ್ಳಬಹುದು.
ಕ್ರೀಡಾಪಟುಗಳು ತುರ್ತಾಗಿ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಕ್ರೀಡೆ ಹಾಗೂ ಕ್ರೀಡೆಯಲ್ಲಿ ಭಾಗವಹಿಸಿದ ವಿವರ, ಆಧಾರ್ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆಯ ವಿವರಗಳನ್ನೊಳಗೊಂಡ ಮಾಹಿತಿಯನ್ನು ಬಿಳಿ ಹಾಳೆಯಲ್ಲಿ ಬರೆದು ದೂ.ಸಂ. ೮೭೬೨೫೨೯೬೭೬ ವಾಟ್ಸ್ಅಪ್ ಅಥವಾ ಚಿಜಥಿssಞoಜಚಿgu@gmಚಿiಟ.ಛಿom ಗೆ ಇ-ಮೇಲ್ಗೆ ಜೂನ್ ೫ ರೊಳಗೆ ಕಳಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ತಿಳಿಸಿದ್ದಾರೆ.