
ಮಡಿಕೇರಿ, ಜೂ. ೧: ಜಿಲ್ಲೆಯ ನಿವೃತ್ತ ಶಸ್ತçಚಿಕಿತ್ಸಕಿ ಪೊನ್ನಂಪೇಟೆ ಯವರಾದ ಡಾ.ಕಾವೇರಿ ನಂಬಿಸನ್ ಅವರು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಕೋವಿಡ್ ಚಿಕಿತ್ಸೆಗೆ ‘ಐವರ್ಮೆಕ್ಟಿನ್’ ಎಂಬ ಔಷಧಿಯನ್ನು ಬಳಸುವಂತೆ ಪತ್ರದ ಮೂಲಕ ಸಲಹೆ ಮಾಡಿದ್ದಾರೆ. ನಿವೃತ್ತ ಶಸ್ತç ಚಿಕಿತ್ಸಕಿ ಡಾ.ಕಾವೇರಿ ನಂಬಿಸನ್ ತಮ್ಮ ಶಸ್ತçಚಿಕಿತ್ಸಾ ತರಬೇತಿ ಹಾಗೂ ಎಫ್.ಆರ್.ಸಿ.ಎಸ್ ಅನ್ನು ಇಂಗ್ಲೆAಡಿನಲ್ಲಿ ಪೂರ್ಣಗೊಳಿಸಿದ್ದಾರೆ. ಇದೀಗ ಪೊನ್ನಂಪೇಟೆಯ ಹೊದ್ದೂರಿನಲ್ಲಿ ಖಾಸಗಿ ಕ್ಲಿನಿಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸಚಿವರಿಗೆ ಇವರು ಬರೆದ ಪತ್ರದಲ್ಲಿ ಐವರ್ಮೆಕ್ಟಿನ್ ಡ್ರಗ್ನ ಪರಿಣಾಮ ಮಡಿಕೇರಿ, ಜೂ. ೧: ಜಿಲ್ಲೆಯ ನಿವೃತ್ತ ಶಸ್ತçಚಿಕಿತ್ಸಕಿ ಪೊನ್ನಂಪೇಟೆ ಯವರಾದ ಡಾ.ಕಾವೇರಿ ನಂಬಿಸನ್ ಅವರು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಕೋವಿಡ್ ಚಿಕಿತ್ಸೆಗೆ ‘ಐವರ್ಮೆಕ್ಟಿನ್’ ಎಂಬ ಔಷಧಿಯನ್ನು ಬಳಸುವಂತೆ ಪತ್ರದ ಮೂಲಕ ಸಲಹೆ ಮಾಡಿದ್ದಾರೆ. ನಿವೃತ್ತ ಶಸ್ತç ಚಿಕಿತ್ಸಕಿ ಡಾ.ಕಾವೇರಿ ನಂಬಿಸನ್ ತಮ್ಮ ಶಸ್ತçಚಿಕಿತ್ಸಾ ತರಬೇತಿ ಹಾಗೂ ಎಫ್.ಆರ್.ಸಿ.ಎಸ್ ಅನ್ನು ಇಂಗ್ಲೆAಡಿನಲ್ಲಿ ಪೂರ್ಣಗೊಳಿಸಿದ್ದಾರೆ. ಇದೀಗ ಪೊನ್ನಂಪೇಟೆಯ ಹೊದ್ದೂರಿನಲ್ಲಿ ಖಾಸಗಿ ಕ್ಲಿನಿಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸಚಿವರಿಗೆ ಇವರು ಬರೆದ ಪತ್ರದಲ್ಲಿ ಐವರ್ಮೆಕ್ಟಿನ್ ಡ್ರಗ್ನ ಪರಿಣಾಮ ಮಡಿಕೇರಿ, ಜೂ. ೧: ಜಿಲ್ಲೆಯ ನಿವೃತ್ತ ಶಸ್ತçಚಿಕಿತ್ಸಕಿ ಪೊನ್ನಂಪೇಟೆ ಯವರಾದ ಡಾ.ಕಾವೇರಿ ನಂಬಿಸನ್ ಅವರು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಕೋವಿಡ್ ಚಿಕಿತ್ಸೆಗೆ ‘ಐವರ್ಮೆಕ್ಟಿನ್’ ಎಂಬ ಔಷಧಿಯನ್ನು ಬಳಸುವಂತೆ ಪತ್ರದ ಮೂಲಕ ಸಲಹೆ ಮಾಡಿದ್ದಾರೆ. ನಿವೃತ್ತ ಶಸ್ತç ಚಿಕಿತ್ಸಕಿ ಡಾ.ಕಾವೇರಿ ನಂಬಿಸನ್ ತಮ್ಮ ಶಸ್ತçಚಿಕಿತ್ಸಾ ತರಬೇತಿ ಹಾಗೂ ಎಫ್.ಆರ್.ಸಿ.ಎಸ್ ಅನ್ನು ಇಂಗ್ಲೆAಡಿನಲ್ಲಿ ಪೂರ್ಣಗೊಳಿಸಿದ್ದಾರೆ. ಇದೀಗ ಪೊನ್ನಂಪೇಟೆಯ ಹೊದ್ದೂರಿನಲ್ಲಿ ಖಾಸಗಿ ಕ್ಲಿನಿಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸಚಿವರಿಗೆ ಇವರು ಬರೆದ ಪತ್ರದಲ್ಲಿ ಐವರ್ಮೆಕ್ಟಿನ್ ಡ್ರಗ್ನ ಪರಿಣಾಮ (ಮೊದಲ ಪುಟದಿಂದ) ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಭಾರತ ಮೂಲದ ವೈದ್ಯ ಶಂಕರ ಶೆಟ್ಟಿ ಸುಮಾರು ೪,೦೦೦ ಕೋವಿಡ್ ಸೋಂಕಿತರಿಗೆ ಐವರ್ಮೆಕ್ಟಿನ್ ನೀಡಿ ಸೋಂಕು ಮುಕ್ತಗೊಳಿಸಲು ಸಹಕರಿಸಿದ್ದಾರೆ ಎಂಬ ಮಾಹಿತಿಯನ್ನು ಡಾ.ಕಾವೇರಿ ನಂಬಿಸನ್ ಅವರು ಉಲ್ಲೇಖಿಸಿದ್ದಾರೆ.
ಈ ಡ್ರಗ್ ಬಳಕೆಗೆ ಐ.ಸಿ.ಎಮ್.ಆರ್ ಹಾಗೂ ಏ.ಐ.ಐ.ಎಮ್.ಎಸ್ ಹಸಿರು ನಿಶಾನೆ ನೀಡಿದೆಯಾದರೂ ಸಾರ್ವಜನಿಕವಾಗಿ ಪ್ರಕಟಿಸಿಲ್ಲ ಎಂಬುದಾಗಿ ನಂಬಿಸನ್ ಅವರು ‘ಶಕ್ತಿ’ ಯೊಂದಿಗೆ ಮಾಹಿತಿ ಹಂಚಿಕೊAಡಿದ್ದಾರೆ. ಒಡಿಸ್ಸಾ, ಗೋವಾ ಹಾಗೂ ಉತ್ತರಪ್ರದೇಶ ರಾಜ್ಯಗಳು ಐವರ್ಮೆಕ್ಟಿನ್ ಅನ್ನು ಬಳಸಿ ಪ್ರಾಥಮಿಕ ಹಂತದ ಕೋವಿಡ್ ಚಿಕಿತ್ಸೆಯನ್ನು ರೋಗಿಗಳಿಗೆ ನೀಡುತ್ತಿವೆ.
ಕೋವಿಡ್ ಆರಂಭಿಕ ಹಂತದಲ್ಲಿ ಐವರ್ಮೆಕ್ಟಿನ್ ಡ್ರಗ್ ಬಳಸಿದರೆ ರೋಗದ ವಿರುದ್ಧ ಬಹಳ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ ಹಾಗೂ ಯಾವುದೇ ರೀತಿಯ ಅಡ್ಡ ಪರಿಣಾಮಗಳಿರುವುದಿಲ್ಲ. ಪ್ರಸ್ತುತ ಕೋವಿಡ್ ಚಿಕಿತ್ಸೆಗೆ ಬಳಸುತ್ತಿರುವ ಡ್ರಗ್ಗಳಿಗಿಂತ ಪರಿಣಾಮಕಾರಿ ಹಾಗೂ ಕಡಿಮೆ ದರದಲ್ಲಿ ದೊರೆಯುತ್ತದೆ. ಪ್ರಾಯೋಗಿಕ ಪರೀಕ್ಷೆಯೊಂದರ ಪ್ರಕಾರ ಶೇ.೭೪ ಸೋಂಕಿತರಲ್ಲಿ ವೈರಸ್ ಉಲ್ಬಣದ ಪ್ರಮಾಣ ಅತೀ ಕಡಿಮೆಯಾಗುತ್ತದೆ. ಈ ಡ್ರಗ್ ಬಳಸಿದವರಿಗೆ ಕೋವಿಡ್ ಬಂದರೂ ಕೂಡ ನಮ್ಮ ಆರೋಗ್ಯದ ಮೇಲೆ ಅಷ್ಟೊಂದು ಪ್ರಭಾವ ತೋರುವುದಿಲ್ಲ ಎಂದು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸ್ತುತ ದೇಶದಾದ್ಯಂತ ನಡೆಯುತ್ತಿರುವ ಲಸಿಕಾ ಅಭಿಯಾನದ ವೇಗ ಗಮನಿಸಿದರೆ ಪ್ರತೀ ಭಾರತೀಯನೂ ಲಸಿಕೆ ಪಡೆಯಬೇಕಾದರೆ ಇನ್ನೂ ಕನಿಷ್ಟ ೮ ರಿಂದ ೧೦ ರಷ್ಟು ತಿಂಗಳುಗಳ ಸಮಯಾವಕಾಶ ಬೇಕಾಗುತ್ತದೆ. ಈ ಸಮಯದಲ್ಲಿ ಲಸಿಕೆ ಪಡೆಯದೆ ಇರುವವರಿಗೆ ಕೋವಿಡ್ ಸೋಂಕು ತೊಂದರೆ ನೀಡಲಿದ್ದು, ಅಂತವರಿAದ ವೈರಸ್ ಹರಡುವಿಕೆಯೂ ಹೆಚ್ಚಾಗಲಿದೆ. ರೋಗಿಗಳು ಆಕ್ಸಿಜನ್ ಇಲ್ಲದೆ, ಬೆಡ್ ಇಲ್ಲದೆ ಪರದಾಡುತ್ತಿರುವ ಸನ್ನಿವೇಶಗಳನ್ನು ಐವರ್ಮೆಕ್ಟಿನ್ ಬಳಕೆಯಿಂದಾಗಿ ತಡೆಯಬಹುದಾಗಿದ್ದು ಆರೋಗ್ಯ ಸಚಿವರು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಐವರ್ಮೆಕ್ಟಿನ್ ಬಳಕೆಯನ್ನು, ಕೋವಿಡ್ ಆರಂಭಿಕ ಹಂತದ ಚಿಕಿತ್ಸೆಗೆ ಕಡ್ಡಾಯ ಮಾಡಬೇಕಾಗಿ ಪತ್ರದ ಮೂಲಕ ಕೋರಿದ್ದಾರೆ. ಶ್ರೀಯುತರು ಹಿಂದಿನ ಕೊಡಗು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿ. ಚೆಪ್ಪುಡೀರ ಎಂ. ಪೂಣಚ್ಚ ಅವರ ಪುತ್ರಿಯಾಗಿದ್ದಾರೆ.