ಪೊನ್ನAಪೇಟೆ, ಜೂ. ೧: ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿಯು ಕೊರೊನಾ ಮಹಾಮಾರಿಯನ್ನು ಮೆಟ್ಟಿನಿಲ್ಲುವ ಮೂಲಕ ಈಗ ಕೊರೊನಾ ಮುಕ್ತ ಗ್ರಾಮ ಪಂಚಾಯಿತಿ ಎಂಬ ಕೀರ್ತಿಗೆ ಪಾತ್ರವಾಗಿದೆ. ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಟ್ಟೂರು, ಕೊಟ್ಟಗೇರಿ ಹಾಗೂ ಹತ್ತುಗಟ್ಟು ಅರಣ್ಯ ಎಂಬ ಮೂರು ಗ್ರಾಮಗಳು ಹಾಗೂ ನಿಟ್ಟೂರು ಗ್ರಾಮ ಪಂಚಾಯಿತಿಯ ಉಪಗ್ರಾಮಗಳಾದ ಮಲ್ಲೂರು, ಪಾಲ್ದಳ, ಕುಂಬಾರ ಕಟ್ಟೆ, ತಟ್ಟೆಕೆರೆ, ಕಾರ್ಮಾಡು, ವಡ್ಡರಮಾಡು, ಬೆಂಡೆಕುತ್ತಿ ಹಾಡಿ, ಕಟ್ಟೆಹಾಡಿ, ದಾಳಿಂಬೆ ಹಾಡಿ, ಕೊಲ್ಲಿಹಾಡಿ, ಹತ್ತುಗಟ್ಟು ಅರಣ್ಯ ಗ್ರಾಮ ಕೊಳಂಗೆರೆ ಹಾಡಿ ಸೇರಿ ನಿಟ್ಟೂರು ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿದೆ.

ಏಪ್ರಿಲ್ ಮೊದಲ ವಾರದಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಗೇರಿ ಗ್ರಾಮದ ಇಬ್ಬರಿಗೆ ಮೊದಲ ಬಾರಿಗೆ ಕೊರೊನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿತ್ತು. ನಂತರದ ದಿನಗಳಲ್ಲಿ ನಿಟ್ಟೂರು, ಕೊಟ್ಟಗೇರಿ, ಕಾರ್ಮಾಡು ಹಾಗೂ ವಡ್ಡರಮಾಡು ಗ್ರಾಮಗಳಲ್ಲಿ ಇದುವರೆಗೆ ಒಟ್ಟು ೨೨ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಇಬ್ಬರು ಸೋಂಕಿತರ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಅವರನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅದರಲ್ಲಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮತ್ತೊಬ್ಬರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದ ೨೦ ಜನ ಸೋಂಕಿತರು ಹೋಮ್ ಐಸೋಲೇಶನ್‌ನಲ್ಲಿದ್ದರು. ಮೇ ೩೦ ರಂದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈಗ ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಕೊರೊನಾ ಪ್ರಕರಣ ಶೂನ್ಯಕ್ಕೆ ಇಳಿದಿದ್ದು ಕೊರೊನಾ ಮುಕ್ತವಾಗಿದೆ.

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಉಪಾಧ್ಯಕ್ಷೆ ಕವಿತಾ ಪ್ರಭು ಹಾಗೂ ಪಿಡಿಓ ಎಸ್.ವಿ. ಮನ್‌ಮೋಹನ್ ಅವರ ಮಾರ್ಗದರ್ಶನದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ತೆರಳಿ ಸೋಂಕಿತರಿಗೆ ಧೈರ್ಯ ತುಂಬಿ, ಸೋಂಕಿತರ ಮನೆಗಳಿಗೆ ಸ್ಯಾನಿಟೈಜ್ ಮಾಡಿ, ಮಾಸ್ಕ್ ನೀಡಿ, ಮನೆಯಿಂದ ಹೊರಗೆ ಬಾರದಂತೆ ಪ್ರತಿ ದಿನ ಎರಡು ಬಾರಿ ಮೈಕ್‌ನಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲದೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರಲು ಸಾಧ್ಯವಾಯಿತು.

ಗ್ರಾ.ಪಂ. ಸದಸ್ಯರುಗಳಾದ ಅಳಮೇಂಗಡ ಆರ್. ಪವಿತ, ಜೆ.ಕೆ. ಸಾಸು, ಎ. ಅಮ್ಮಯ್ಯ, ಪಣಿಯರ ರಾಜು, ಕಾಟಿಮಾಡ ಶರೀನ್ ಮುತ್ತಣ್ಣ, ಪಿ.ಆರ್. ಅಮ್ಮುಣಿ, ಜೆ.ಎ. ಸುಮತಿ, ಗ್ರಾ.ಪಂ. ಸಿಬ್ಬಂದಿಗಳು, ಬಾಳೆಲೆ ಹೋಬಳಿ ನೋಡಲ್ ಅಧಿಕಾರಿ ಡಾ. ತಮ್ಮಯ್ಯ, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕೋವಿಡ್ ಕೆಲಸಕ್ಕೆ ನಿಯೋಜನೆಗೊಂಡ ಶಿಕ್ಷಕರು, ಫ್ಲೆöÊ್ಲಯಿಂಗ್ ಸ್ಕಾ÷್ವಡ್ ಪಿ.ಎ. ಪ್ರಭುಕುಮಾರ್, ಗ್ರಾ.ಪಂ. ಸಿಬ್ಬಂದಿ ಹಾಗೂ ಗ್ರಂಥಾಲಯ ಮೇಲ್ವಿಚಾರಕರು ಎಲ್ಲರೂ ಒಂದುಗೂಡಿ ದಣಿವರಿಯದೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಕೊರೊನಾಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

‘ನಮ್ಮ ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಸಿಬ್ಬಂದಿಯ ಸಂಪೂರ್ಣ ಸಹಕಾರದಿಂದ ಇದು ಸಾಧ್ಯವಾಗಿದೆ. ಗ್ರಾಮದ ಕೊರೊನಾ ಸೋಂಕಿತರೊಬ್ಬರಿಗೆ ರಾತ್ರಿ ವೇಳೆಯಲ್ಲಿ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಸಂದÀರ್ಭ ಆ್ಯಂಬ್ಯುಲೆನ್ಸ್ಗೆ ಕರೆ ಮಾಡಿದರೆ ಬರಲು ತಡವಾಗಿಬಿಡುತ್ತದೆ ಎಂದು ಸ್ವತಃ ಗ್ರಾ.ಪಂ. ಸದಸ್ಯರಾದ ಶರೀನ್ ಮುತ್ತಣ್ಣ ಪಿಪಿಇ ಕಿಟ್ ಧರಿಸಿ ರೋಗಿಯನ್ನು ತಮ್ಮ ಜೀಪಿನಲ್ಲಿಯೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದರು. ಪಂಚಾಯಿಯ ಬಿಲ್ ಕಲೆಕ್ಟರ್ ಟಿ.ಡಿ. ಪೂಣಚ್ಚ ಅವರು ಕೂಡ ಪ್ರತಿ ಸೋಂಕಿತರ ಮನೆಗೆ ತೆರಳಿ, ಅಗತ್ಯ ವಸ್ತು ತಲುಪಿಸುವ ಜವಾಬ್ದಾರಿ ವಹಿಸಿಕೊಂಡು, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಇಲಾಖೆಯ ಸರ್ವರ ಸಹಕಾರದಿಂದಾಗಿ ಇಂದು ನಮ್ಮ ಪಂಚಾಯಿತಿ ಕೊರೊನಾ ಮುಕ್ತವಾಗಿದೆ. ಮುಂದೆ ಹೊಸ ಪ್ರಕರಣಗಳು ಬರದಂತೆ ತಡೆಯುವ ಸವಾಲು ನಮ್ಮೆಲ್ಲರ ಮೇಲಿದ್ದು, ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ’ ಎಂದು ಗ್ರಾ.ಪಂ. ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ ತಿಳಿಸಿದ್ದಾರೆ.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಪಂಚಾಯಿತಿಯ ಆದೇಶಕ್ಕೆ ಗೌರವ ನೀಡಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದಾರೆ. ಪಂಚಾಯಿಯ ಟಾಸ್ಕ್ಫೋರ್ಸ್ ಶ್ರಮದೊಂದಿಗೆ ಕಂದಾಯ ಪರಿವೀಕ್ಷಕ ಸಮೀವುಲ್ಲ ಶರೀಫ್, ಗ್ರಾಮ ಲೆಕ್ಕಿಗ ಪ್ರಸಾದ್, ಗ್ರಾಮ ಸಹಾಯಕ ಗಣೇಶ್ ಉತ್ತಮ ಸಹಕಾರ ನೀಡಿದ್ದಾರೆ. ಹೋಬಳಿ ನೋಡಲ್ ಅಧಿಕಾರಿ ಡಾ. ತಮ್ಮಯ್ಯ, ಆರೋಗ್ಯ ಅಧಿಕಾರಿ ಡಾ. ಅಶೋಕ್, ಹೆಲ್ತ್ ಇನ್ಸ್ಪೆಕ್ಟರ್‌ಗಳಾದ ತೇಜಸ್ ಹಾಗೂ ಪ್ರವೀಣ್, ಆರೋಗ್ಯ ಕಾರ್ಯಕರ್ತೆಯರಾದ ರೇಷ್ಮಾ ಹಾಗೂ ಹರಿಣಿ, ಆಶಾ ಕಾರ್ಯಕರ್ತೆಯರಾದ ಶಾಂತಿ, ದೀಪು, ಲಲಿತ, ಕಾವೇರಮ್ಮ ಹಾಗೂ ಭಾಗ್ಯ, ಅಂಗನವಾಡಿ ಕಾರ್ಯಕರ್ತೆಯರು, ಕೋವಿಡ್ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರು ಇವರೆಲ್ಲರ ಪ್ರಯತ್ನದಿಂದಾಗಿ ನಿಟ್ಟೂರು ಕೊರೊನಾ ಮುಕ್ತ ಪಂಚಾಯಿತಿ ಆಗಲು ಕಾರಣವಾಗಿದೆ ಎಂದು ಪಿಡಿಓ ಎಸ್.ವಿ. ಮನ್‌ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. - ಚನ್ನನಾಯಕ