ಮಡಿಕೇರಿ, ಮೇ ೩೧: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ನೇಮಕಾತಿ ಸಮಿತಿಯ ಅಧಿಸೂಚನೆಯನ್ವಯ ರಾಜ್ಯದ ಹಲವೆಡೆ ಸೇರಿದಂತೆ ಕೊಡಗು ಜಿಲ್ಲೆಯ ಆಸ್ಪತ್ರೆಗಳಿಗೆ ಸಾಮಾನ್ಯ ವೈದ್ಯಾಧಿಕಾರಿ ಹುದ್ದೆಗೆ ವೈದ್ಯರನ್ನು ನೇಮಕಗೊಳಿಸಲಾಗಿದೆ. ಎರಡು ವರ್ಷಗಳ ಖಾಯಂ ಪೂರ್ವ ಸೇವಾವಧಿಗೆ ಒಳಪಟ್ಟು ಷರತ್ತುಗಳನ್ವಯ ಜಿಲ್ಲೆಯ ವಿವಿಧ ಸ್ಥಳಗಳಿಗೆ ನಿಯುಕ್ತಿಗೊಳಿಸಲಾಗಿದೆ.ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಡಾ.ಸಾಗರ್ ಪಿ. ರಾಜ್, ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆಆಸ್ಪತ್ರೆಗಳಿಗೆ ವೈದ್ಯಾಧಿಕಾರಿಗಳ ನೇಮಕ(ಮೊದಲ ಪುಟದಿಂದ) ಡಾ. ಮಹಮ್ಮದ್ ಮೊಯಿನುದ್ದಿನ್, ಕಣ್ಣಂಗಾಲ ಪ್ರಾ.ಆ. ಕೇಂದ್ರಕ್ಕೆ ಡಾ.ಚೈತ್ರ ಸಿ.ಜಿ, ಹುದಿಕೇರಿ ಪ್ರಾ.ಆ. ಕೇಂದ್ರಕ್ಕೆ ಡಾ.ಖಲೀಲ್ ಅಹ್ಮದ್, ಸುಂಟಿಕೊಪ್ಪ ಪ್ರಾ.ಆ ಕೇಂದ್ರಕ್ಕೆ ಡಾ.ಸಹನಶ್ರೀ ಸಿ.ಎನ್, ಕಾಕೋಟುಪರಂಬು ಪ್ರಾ.ಆ ಕೇಂದ್ರಕ್ಕೆ ಡಾ.ಸುಪ್ರಿಯಾ ಎಸ್,ಕುಟ್ಟಂದಿ ಪ್ರಾ.ಆ ಕೇಂದ್ರಕ್ಕೆ ಡಾ. ರುಕ್ಸಾನಾ, ಮಾದಾಪುರ ಪ್ರಾ.ಆ. ಕೇಂದ್ರಕ್ಕೆ ಡಾ. ನಿಶಾ ಎಸ್, ಚೆಟ್ಟಳ್ಳಿ ಪ್ರಾ.ಆ. ಕೇಂದ್ರಕ್ಕೆ ಡಾ. ಗೌತಮ್, ಕೂಡಿಗೆ ಪ್ರಾ.ಆ. ಕೇಂದ್ರಕ್ಕೆ ಡಾ .ಶೃತಿ ಎನ್, ಮೂರ್ನಾಡು ಪ್ರಾ.ಆ. ಕೇಂದ್ರಕ್ಕೆ ಡಾ. ವಿಜಯ್ ಕುಮಾರ್ ಎಸ್.ಪಿ, ಕೊಡ್ಲಿಪೇಟೆ ಪ್ರಾ.ಆ. ಕೇಂದ್ರಕ್ಕೆ ಡಾ.ಸಿ ಪವಿತ್ರಾ, ಭಾಗಮಂಡಲ ಪ್ರಾ.ಆ ಕೇಂದ್ರಕ್ಕೆ ಡಾ.ಸುನಿಲ್ ಎಮ್.ಜಿ, ಶಿರಂಗಾಲ ಪ್ರಾ.ಆ. ಕೇಂದ್ರಕ್ಕೆ ಡಾ. ಶ್ವೇತಾ ಕೆ, ಶಾಂತಳ್ಳಿ ಪ್ರಾ.ಆ. ಕೇಂದ್ರಕ್ಕೆ ಡಾ.ನಿಕೇತನ್ ಜಿ, ಸೂರ್ಲಬ್ಬಿ ಪ್ರಾ.ಆ. ಕೇಂದ್ರಕ್ಕೆ ಡಾ. ಸೌಮ್ಯ ಬಿ.ಪಿ, ಚೇರಂಬಾಣೆ ಪ್ರಾ.ಆ. ಕೇಂದ್ರಕ್ಕೆ ಡಾ. ಪವಿತ್ರಾ ಎಸ್.ಬಿ, ಚೆನÀ್ನನಕೋಟೆ ಪ್ರಾ.ಆ. ಕೇಂದ್ರಕ್ಕೆ ಡಾ. ಶಿವಪ್ಪ ಶಂಕರಪ್ಪ ಗೋಟ್ಯಾಲ್, ಹೆಬ್ಬಾಲೆ ಪ್ರಾ.ಆ. ಕೇಂದ್ರಕ್ಕೆ ಡಾ. ಭರತ್ ಕುಮಾರ್ ಡಿ.ಆರ್. ಅವರುಗಳನ್ನ ನೇಮಕ ಮಾಡಲಾಗಿದೆ.