*ಸಿದ್ದಾಪುರ, ಮೇ ೩೧ : ಅರಣ್ಯ ಪ್ರದೇಶದಲ್ಲಿ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಕಾಡಾನೆಗಳ ಹಿಂಡು ನಿರಂತರವಾಗಿ ಅಭ್ಯತ್ ಮಂಗಲದ ಸುತ್ತಮುತ್ತಲ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದು, ಗಿಡ, ಮರಗಳಿಗೆ ಹಾನಿ ಮಾಡುತ್ತಿವೆ.

ಕಳೆದ ಒಂದು ತಿಂಗಳಿನಿAದ ಈ ಭಾಗದ ಹಲವು ತೋಟಗಳಲ್ಲಿ ಹಲಸು ಹಣ್ಣಾಗಿ ಘಮಘಮಿಸುತ್ತಿದೆ. ಇದನ್ನು ಸವಿಯಲೆಂದು ಕಾಡಾನೆ ಗಳ ಹಿಂಡು ತೋಟಗಳಲ್ಲಿ ಬೀಡು ಬಿಡುತ್ತಿವೆ. ಇದರಿಂದಾಗಿ ನಷ್ಟದಿಂದ ಬೇಸತ್ತಿರುವ ತೋಟದ ಮಾಲೀಕರೊಬ್ಬರು ಹಲಸಿನ ಮರಗಳಲ್ಲಿದ್ದ ಹಣ್ಣುಗಳನ್ನೆಲ್ಲ ಕಾರ್ಮಿಕರಿಂದ ಕೀಳಿಸಿ ರಸ್ತೆ ಬದಿ ರಾಶಿ ಹಾಕಿದ್ದಾರೆ. ಆನೆಗಳು ಬಂದು ಇಲ್ಲಿಯೇ ತಿನ್ನಲಿ, ತೋಟಗಳಿಗೆ ನುಗ್ಗುವುದು ಬೇಡ ಎನ್ನುವ ಅಭಿಪ್ರಾಯ ಮಾಲೀಕರದ್ದು. ವರ್ಷಪೂರ್ತಿ ಕಾಡಾನೆಗಳ ಹಾವಳಿ ಇರುತ್ತದೆ, ಹಲಸು ಹಣ್ಣಾಗುವ ಸಂದರ್ಭದಲ್ಲAತೂ ಹಿಂಡು, ಹಿಂಡು ಕಾಡಾನೆಗಳು ತೋಟಗಳಿಗೆ ನುಗ್ಗಿ ಧ್ವಂಸಗೊಳಿಸುತ್ತಿವೆ. ಆದ್ದರಿಂದ ಆನೆಗಳು ತೋಟಕ್ಕೆ ನುಗ್ಗದಿರಲಿ ಎಂದು ಹಲಸಿನ ಹಣ್ಣುಗಳನ್ನು ಕೊಯ್ದು ತೋಟದಿಂದ ಹೊರ ಹಾಕಲಾಗಿದೆ ಎಂದು ಬೆಳೆಗಾರ ಡಿ.ಹೆಚ್.ಅಜಿತ್ ಕುಮಾರ್ ತಿಳಿಸಿದ್ದಾರೆ.ಆದರೆ ರಸ್ತೆಯಲ್ಲಿ ಕಾಡಾನೆಗಳು ಹಲಸಿನ ಹಣ್ಣು ತಿನ್ನುತ್ತಾ ನಿಂತು ಬಿಟ್ಟರೆ ದಾರಿಹೋಕರಿಗೆ ಅಪಾಯ ಎದುರಾಗಲಿದೆ ಎನ್ನುವ ಆತಂಕ ವನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಲಸಿನ ಹಣ್ಣುಗಳನ್ನು ಆನೆಗಳಿಗೆ ನೀಡುವುದು ಸೂಕ್ತ, ಆದರೆ ತೋಟದಿಂದ ತಂದು ರಸ್ತೆ ಬದಿ, ಯಾರದ್ದೋ ಮನೆ ಬಳಿ, ಜನ ಸಂಚಾರದ ಪ್ರದೇಶದಲ್ಲಿ ಹಾಕುವುದು ಸರಿಯಲ್ಲ. ಅರಣ್ಯ ಪ್ರದೇಶದಲ್ಲಿ ಹಲಸಿನ ಹಣ್ಣು ಸುರಿದರೆ ಅಲ್ಲಿಂದ ಇಲ್ಲಿಗೆ ಆನೆಗಳು ಬರುವುದು ನಿಲ್ಲುತ್ತದೆ ಎಂದು ಮತ್ತೋರ್ವ ಬೆಳೆಗಾರ ಕೆ.ಎಸ್.ಅನಿಲ್ ಅಭಿಪ್ರಾಯಿಸಿದ್ದಾರೆ.

ಲಾಕ್ ಡೌನ್ ಕಾರಣ ದಿಂದ ಈಗ ಜನ ಮತ್ತು ವಾಹನಗಳ ಸಂಚಾರವಿಲ್ಲ, ಆದ ಕಾರಣ ಕಾಡಾನೆಗಳು ಬರುವ ಮಾರ್ಗದಲ್ಲಿ ಹಲಸಿನ ಹಣ್ಣುಗಳನ್ನು ಹಾಕಲಾಗಿದೆ. ಬೇರೆ ಸಂದರ್ಭಗಳಲ್ಲಿ ಸುರಕ್ಷಿತ ಸ್ಥಳದಲ್ಲಿ ಹಾಕಲಾಗುವುದು ಎಂದು ಬಾಡಿಗೆ ಟ್ರಾö್ಯಕ್ಟರ್ ಚಾಲಕ ರವಿ ತಿಳಿಸಿದ್ದಾರೆ.

- ಅಂಚೆಮನೆ ಸುಧಿ