ಸಿದ್ದಾಪುರ, ಜೂ.೧: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೊರೊನಾ ವೈರಸ್ ಪ್ರಕರಣವು ಪತ್ತೆ ಆಗಿದ್ದರು ಕೂಡ ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಗ್ರಾಮದ ಅವರೆಗುಂದ, ಬಸವನಹಳ್ಳಿ, ದುಬಾರೆ ಭಾಗದ ಗ್ರಾಮಗಳು ಕೊರೊನಾ ಮುಕ್ತ ಗ್ರಾಮವಾಗಿವೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿಯ ಪಿಡಿಓ ವಿಶ್ವನಾಥ್ ತಿಳಿಸಿದರು.

ಸಿದ್ದಾಪುರ ಸಮೀಪದ ಸುತ್ತ ಮುತ್ತ ಗ್ರಾಮಗಳಲ್ಲಿ ಕೊರೊನಾ ಸಿದ್ದಾಪುರ, ಜೂ.೧: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೊರೊನಾ ವೈರಸ್ ಪ್ರಕರಣವು ಪತ್ತೆ ಆಗಿದ್ದರು ಕೂಡ ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಗ್ರಾಮದ ಅವರೆಗುಂದ, ಬಸವನಹಳ್ಳಿ, ದುಬಾರೆ ಭಾಗದ ಗ್ರಾಮಗಳು ಕೊರೊನಾ ಮುಕ್ತ ಗ್ರಾಮವಾಗಿವೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿಯ ಪಿಡಿಓ ವಿಶ್ವನಾಥ್ ತಿಳಿಸಿದರು.

ಸಿದ್ದಾಪುರ ಸಮೀಪದ ಸುತ್ತ ಮುತ್ತ ಗ್ರಾಮಗಳಲ್ಲಿ ಕೊರೊನಾ ನುಸುಳದಂತೆ ಎಚ್ಚರ ವಹಿಸಿದ ಹಿನ್ನೆಲೆಯಲ್ಲಿ ಈ ಮೂರು ಗ್ರಾಮಗಳು ಕೊರೊನಾ ಮುಕ್ತ ಗ್ರಾಮಗಳಾಗಿದ್ದು, ಇಲ್ಲಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಇಲ್ಲಿನ ಮಂದಿ ಮಾಸ್ಕ್ ಧರಿಸುತ್ತ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುತ್ತಮುತ್ತಲಿನ ಸಮೀಪದ ಊರುಗಳಿಗೆ ಕೆಲಸಕ್ಕೂ ತೆರಳುತ್ತಿದ್ದಾರೆ. ಇದೇ ರೀತಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲೂ ಕೊರೊನಾ ಮುಕ್ತ ಮಾಡಲು ಪಂಚಾಯಿತಿಯ ಮೂಲಕ ಶ್ರಮವಹಿಸಲಾಗುತ್ತದೆ ಎಂದರು. ಈ ಬಗ್ಗೆ ಟಾಸ್ಕ್ ಫೋರ್ಸ್ ಸಮಿತಿಯ ಮೂಲಕ ಅರಿವು ಮೂಡಿಸಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುವು ದೆಂದು ತಿಳಿಸಿದರು.

-ವಾಸು