ಗೋಣಿಕೊಪ್ಪಲು, ಜೂ. ೧: ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಗೆ ಧನ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಾತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಹಲವಾರು ಸಮಯದಿಂದ ಶಾರದ ಎಂಬ ಮಹಿಳೆ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿಯೇ ಉಳಿದುಕೊಂಡಿದ್ದರು. ವಿಷಯ ತಿಳಿದ ಗ್ರಾ.ಪಂ. ಸದಸ್ಯರು ಹಾಗೂ ಉದ್ಯಮಿ ಗುಮ್ಮಟೀರ ದರ್ಶನ್ ನಂಜಪ್ಪ ಖುದ್ದಾಗಿ ಆಕೆಯ ಮನೆಗೆ ತೆರಳಿ ಚೆಕ್ ಅನ್ನು ಆತಳ ಪತಿ ಕೇಶವ್ ಗಾಂಧಿಗೆ ಹಸ್ತಂತಾರ ಮಾಡಿದರು. ಈ ವೇಳೆ ಗ್ರಾಮದ ಮುಖಂಡರಾದ ಗುಮ್ಮಟೀರ ಚೆಂಗಪ್ಪ, ತೀತಮಾಡ ತಿಮ್ಮಯ್ಯ ಹಾಜರಿದ್ದರು.