ಚೆಟ್ಟಳ್ಳಿ, ಜೂ. ೧: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಕೆರೆ ವಾರ್ಡಿನಲ್ಲಿ ಹೆಚ್ಚಾಗಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಚೆಟ್ಟಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಸಿ. ನಂದೀಶ್‌ಕುಮಾರ್ ಅವರಿಂದ ಕಂಡೆಕೆರೆ ವಾರ್ಡಿನ ಗ್ರಾಮಸ್ಥರಿಗೆ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕ್ರಮಕೈಗೊಳ್ಳುವ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜ ನಿಕರಿಗೆ ಪ್ರಚಾರ ಪಡಿಸಲಾಯಿತು. ಈ ಸಂದರ್ಭ ವೈದ್ಯಾಧಿಕಾರಿ ತೇಜಸ್ವಿ, ಪೊಲೀಸ್ ಇಲಾಖೆಯ ಮಹೇಶ್ ಶಿವರಾಜ್, ಪಂಚಾಯಿತಿ ಸದಸ್ಯರಾದ ತೀರ್ಥಕುಮಾರ್, ಮಂಜುನಾಥ್, ಸಿಂದು, ಆರೋಗ್ಯ ನಿರೀಕ್ಷಕ ಲೋಕೇಶ್, ಆಶಾಕಾರ್ಯಕರ್ತೆ ಸುಮಿತ್ರ, ಪಂಚಾಯಿತಿ ಸಿಬ್ಬಂದಿ ಚಂದ್ರ ಹಾಜರಿದ್ದರು. ಅಭಿವೃದ್ಧಿ ಅಧಿಕಾರಿ ನಂದೀಶ್ ಕುಮಾರ್, ಪಂಚಾಯಿತಿ ವಾಹನ ಚಲಾಯಿಸಿ ಧ್ವನಿವರ್ಧಕದ ಮೂಲಕ ಮುನ್ನೆಚ್ಚರಿಕಾ ಕ್ರಮದ ಮೂಲಕ ಪ್ರಚಾರ ಮಾಡಿದರು.