ಪೊನ್ನಂಪೇಟೆ, ಮೇ ೩೦: ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಯಾಗ ಬೇಕಾಗಿರುವುದು ಮನುಷ್ಯ ಜೀವನದ ಸಹಜವಾದ ಪ್ರಕ್ರಿಯೆಯಾಗಿದೆ. ಬದಲಾವಣೆಗೆ ಹೊಂದಿಕೊಳ್ಳುವುದೇ ಸಂಕಷ್ಟ ಮತ್ತು ಸಮಸ್ಯೆಗಳನ್ನು ಎದುರಿಸುವ ಪ್ರಮುಖ ಅಸ್ತçವಾಗಿದೆ ಎಂದು ಹೇಳಿರುವ ರಾಜ್ಯದ ಹೆಸರಾಂತ ಶಿಕ್ಷಣ ತಜ್ಞ, ಜೇಸಿಸ್ನ ಹಿರಿಯ ತರಬೇತುದಾರ ಮೈಸೂರಿನ ಆರ್. ಎ. ಚೇತನ್ ರಾಮ್ ಅವರು, ಯಾವುದೇ ಸಮಸ್ಯೆ ಮತ್ತು ಸಂಕಷ್ಟಗಳು ಶಾಶ್ವತವಲ್ಲ. ಆದ್ದರಿಂದ ಜನತೆ ಆತಂಕಪಡದೆ ಆಶಾವಾದಿ ಗಳಾಗಿರಬೇಕು ಎಂದು ಧೈರ್ಯ ತುಂಬಿದ್ದಾರೆ.
ಭಾರತೀಯ ಜೇಸಿಸ್ ವತಿಯಿಂದ ದೇಶದಾದ್ಯಂತ ಏಕ ಕಾಲದಲ್ಲಿ ಆಚರಿಸಲಾದ ‘ರಾಷ್ಟಿçÃಯ ತರಬೇತಿ ದಿನ'ದ ಅಂಗವಾಗಿ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ‘ಝೂಮ್' ವೇದಿಕೆ ಮೂಲಕ ಭಾನುವಾರದಂದು ಆಯೋಜಿಸಲಾಗಿದ್ದ "ಸಾಧ್ಯವೆಂದರೆ ಸಾಧ್ಯ, ಭರವಸೆಯೇ ನವರಾತ್ರಿ" ಎಂಬ ವಿಷಯದ ಕುರಿತ ಆನ್ ಲೈನ್ ತರಬೇತಿ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಪಾಲ್ಗೊಂಡು ಮಾತನಾಡಿದ ಚೇತನ್ ರಾಮ್, ಬದಲಾವಣೆ ಪ್ರಕೃತಿ ನಿಯಮ. ಬದಲಾವಣೆಗೆ ಒಡ್ಡಿಕೊಳ್ಳದಿದ್ದಲ್ಲಿ ಬದಲಾವಣೆಯ ಗಾಳಿಯೇ ನಮ್ಮನ್ನು ಬದಲು ಮಾಡಿಬಿಡುತ್ತದೆ ಎಂದು ಎಚ್ಚರಿಸಿದರು. ತರಬೇತಿ ಪೊನ್ನಂಪೇಟೆ, ಮೇ ೩೦: ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಯಾಗ ಬೇಕಾಗಿರುವುದು ಮನುಷ್ಯ ಜೀವನದ ಸಹಜವಾದ ಪ್ರಕ್ರಿಯೆಯಾಗಿದೆ. ಬದಲಾವಣೆಗೆ ಹೊಂದಿಕೊಳ್ಳುವುದೇ ಸಂಕಷ್ಟ ಮತ್ತು ಸಮಸ್ಯೆಗಳನ್ನು ಎದುರಿಸುವ ಪ್ರಮುಖ ಅಸ್ತçವಾಗಿದೆ ಎಂದು ಹೇಳಿರುವ ರಾಜ್ಯದ ಹೆಸರಾಂತ ಶಿಕ್ಷಣ ತಜ್ಞ, ಜೇಸಿಸ್ನ ಹಿರಿಯ ತರಬೇತುದಾರ ಮೈಸೂರಿನ ಆರ್. ಎ. ಚೇತನ್ ರಾಮ್ ಅವರು, ಯಾವುದೇ ಸಮಸ್ಯೆ ಮತ್ತು ಸಂಕಷ್ಟಗಳು ಶಾಶ್ವತವಲ್ಲ. ಆದ್ದರಿಂದ ಜನತೆ ಆತಂಕಪಡದೆ ಆಶಾವಾದಿ ಗಳಾಗಿರಬೇಕು ಎಂದು ಧೈರ್ಯ ತುಂಬಿದ್ದಾರೆ.
ಭಾರತೀಯ ಜೇಸಿಸ್ ವತಿಯಿಂದ ದೇಶದಾದ್ಯಂತ ಏಕ ಕಾಲದಲ್ಲಿ ಆಚರಿಸಲಾದ ‘ರಾಷ್ಟಿçÃಯ ತರಬೇತಿ ದಿನ'ದ ಅಂಗವಾಗಿ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ‘ಝೂಮ್' ವೇದಿಕೆ ಮೂಲಕ ಭಾನುವಾರದಂದು ಆಯೋಜಿಸಲಾಗಿದ್ದ "ಸಾಧ್ಯವೆಂದರೆ ಸಾಧ್ಯ, ಭರವಸೆಯೇ ನವರಾತ್ರಿ" ಎಂಬ ವಿಷಯದ ಕುರಿತ ಆನ್ ಲೈನ್ ತರಬೇತಿ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಪಾಲ್ಗೊಂಡು ಮಾತನಾಡಿದ ಚೇತನ್ ರಾಮ್, ಬದಲಾವಣೆ ಪ್ರಕೃತಿ ನಿಯಮ. ಬದಲಾವಣೆಗೆ ಒಡ್ಡಿಕೊಳ್ಳದಿದ್ದಲ್ಲಿ ಬದಲಾವಣೆಯ ಗಾಳಿಯೇ ನಮ್ಮನ್ನು ಬದಲು ಮಾಡಿಬಿಡುತ್ತದೆ ಎಂದು ಎಚ್ಚರಿಸಿದರು. ತರಬೇತಿ ಸೇರಿದಂತೆ ರಾಜ್ಯದ ವಿವಿಧ ಭಾಗ ಗಳಿಂದ ನೂರಾರು ಆಸಕ್ತರು ಈ ವೆಬಿನಾರ್ನಲ್ಲಿ ಭಾಗವಹಿಸಿದ್ದರು.
ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗದ ಘಟಕಾಧ್ಯಕ್ಷ ಎಂ.ಎನ್. ವನಿತ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಘಟಕದ ಕೋಶಾಧಿಕಾರಿ ಗಳಾದ ದಿಲನ್ ಕುಪ್ಪಂಡ ಜೇಸಿವಾಣಿ ವಾಚಿಸಿದರು. ನಿರ್ದೇಶಕ ಡಾ. ಬಿ.ಎಂ. ಗಣೇಶ್ ಉದ್ಘಾಟಕರನ್ನು ಪರಿಚಯಿ ಸಿದರೆ, ಸ್ಥಾಪಕಾಧ್ಯಕ್ಷ ರಫೀಕ್ ತೂಚಮ ಕೇರಿ ತರಬೇತುದಾರರನ್ನು ಪರಿಚಯಿ ಸಿದರು. ಕಾರ್ಯದರ್ಶಿ ಎ.ಪಿ. ದಿನೇಶ್ ವಂದಿಸಿದರು.