ಮಡಿಕೇರಿ, ಮೇ ೩೦: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಮ್ಮತ್ತಿ ಶಾಖೆ ಬಾಡಿಗೆ ಕಟ್ಟಡದಿಂದ ಇದೀಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊAಡಿದೆ. ನೂತನ ಕಟ್ಟಡವನ್ನು ಇತ್ತೀಚೆಗೆ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ಉದ್ಘಾಟಿಸಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಮ್ಮತ್ತಿ ಶಾಖೆಯ ಸ್ವಂತ ಕಟ್ಟಡವನ್ನು ಸಾಂಕೇತಿಕವಾಗಿ ಕೋವಿಡ್-೧೯ರ ಸರಕಾರದ ಮಾರ್ಗಸೂಚಿಗೆ ಒಳಪಟ್ಟು ಕಟ್ಟಡ ಉದ್ಘಾಟಿಸಲಾಯಿತು. ಬ್ಯಾಂಕ್ ಒಟ್ಟು ೨೧ ಶಾಖೆಯನ್ನು ಹೊಂದಿದ್ದು, ಪ್ರಸ್ತುತ ಅಮ್ಮತ್ತಿ ಶಾಖೆಯ ಸ್ವಂತ ಕಟ್ಟಡದೊಂದಿಗೆ ಒಟ್ಟು ಬ್ಯಾಂಕಿನ ೧೧ ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದರಿ ಶಾಖಾ ಕಟ್ಟಡದಲ್ಲಿ ಏಟಿಎಂ ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ.

ಬ್ಯಾಂಕ್‌ನ ಭದ್ರತಾ ಕೊಠಡಿಯನ್ನು ಬ್ಯಾಂಕ್‌ನ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ನಗದು ಕೌಂಟರನ್ನು ನಿರ್ದೇಶಕ ಹೊಟ್ಟೆಂಗಡ ಎಂ. ರಮೇಶ್ ಹಾಗೂ ಶಾಖಾ ವ್ಯವಸ್ಥಾಪಕ ಕೊಠಡಿಯನ್ನು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಬಾಲಶೇಖರ್ ಹಾಗೂ ಪ್ರಭಾರ ಪ್ರಧಾನ ವ್ಯವಸ್ಥಾಪಕ ಕೆ.ಕೆ. ಪೂವಯ್ಯ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹಾಗೂ ಬ್ಯಾಂಕ್ ನಿರ್ದೇಶಕ ಅಪ್ಪಚೆಟ್ಟೋಳಂಡ ಕೆ. ಮನು ಮುತ್ತಪ್ಪ, ನಿರ್ದೇಶಕ ಕಿಮ್ಮುಡೀರ ಎ. ಜಗದೀಶ್, ಅಪೆಕ್ಸ್ ಬ್ಯಾಂಕ್‌ನ ನಾಮನಿರ್ದೇಶಕ ಕೆ. ಅರುಣ್ ಭೀಮಯ್ಯ, ಬ್ಯಾಂಕ್‌ನ ಕೇಂದ್ರ ಕಚೇರಿ ಅಧಿಕಾರಿ ಮತ್ತು ಅಮ್ಮತ್ತಿ ಶಾಖಾ ವ್ಯವಸ್ಥಾಪಕಿ ಹೆಚ್.ಪಿ. ಲೌಲಿ ಹಾಗೂ ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.