ಸAಪಾಜೆ, ಮೇ ೩೦: ಸದಸ್ಯರು ತಾವು ಪಡೆದಿರುವ ಅಲ್ಪಾವಧಿ ಬೆಳೆಸಾಲ (ಕೆಸಿಸಿ ಸಾಲ) ವನ್ನು ನವೀಕರಿಸುವ ಸಂದರ್ಭ ದೇಶಾದ್ಯಂತ ಲಾಕ್‌ಡೌನ್ ನಿಂದಾಗಿ ಆರ್ಥಿಕ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಸಾಲದ ಸಂಪೂರ್ಣ ಮೊಬಲಗನ್ನು ಮರುಪಾವತಿ ಮಾಡಲು ತೊಂದರೆ ಅನುಭವಿಸುತ್ತಿರುವುದರಿಂದ ಅಂತಹ ಸದಸ್ಯರ ನೆರವಿಗೆ ಬರಲು ನಮ್ಮ ಸಂಘದ ಆಡಳಿತ ಮಂಡಳಿ ನಿರ್ಧರಿಸಿದೆ.

ಕೆಸಿಸಿ ಸಾಲ ನವೀಕರಣ ಮಾಡಲು ಹಣ ಹೊಂದಿಸಲು ಸಾಧ್ಯವಾಗದ ಸದಸ್ಯರ ಸಾಲದ ಮೊಬಲ ಗನ್ನು ಸಂಪೂರ್ಣವಾಗಿ ಸಂಸ್ಥೆಯೇ ಸಾಲದ ರೂಪದಲ್ಲಿ ಪಾವತಿಸಿ, ನವೀಕರಿಸುವ ಮೂಲಕ ಸದಸ್ಯರಿಗೆ ನೆರವಾಗಲಿದೆ. ತಾ.೩೦.೯.೨೦೨೧ ಅಂದರೆ ಸೆಪ್ಟೆಂಬರ್ ತಿಂಗಳ ಕೊನೆಯವರೆಗೆ ನವೀಕರಿಸಲು ಇರುವ ಎಲ್ಲಾ ಕೆಸಿಸಿ ಸಾಲಗಳಿಗೆ ಈ ಸೌಲಭ್ಯ ನೀಡಲಾಗುವುದು.

ಇದಲ್ಲದೆ ಸದಸ್ಯ ರೈತರ ಅವಶ್ಯಕತೆಗನುಗುಣವಾಗಿ ಕೃಷಿ ಸಲಕರಣೆಗಳು, ರಸಗೊಬ್ಬರ, ಔಷಧ ಮತ್ತಿತರ ಕೃಷಿ ಸಂಬAಧಿತ ವಸ್ತು ಗಳನ್ನು ಸಂಸ್ಥೆಯಿAದ ಖರೀದಿಸುವ ಸದಸ್ಯರಿಗೆ ರೂ.೨೦೦೦೦/ ದವರೆಗೆ ವಿಶೇಷ ಸಾಲ ನೀಡಲಾಗುವುದು. ಈ ಸಾಲದ ಅವಧಿ ೫ ತಿಂಗಳು ಅಂದರೆ ತಾ.೩೦.೯.೨೦೨೧ ಆಗಿರುತ್ತದೆ ಎಂದು ಸಂಘದ ಅಧ್ಯಕ್ಷ ಅನಂತ್ ಊರುಬೈಲು ತಿಳಿಸಿದ್ದು, ಸದಸ್ಯರು ಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದ್ದಾರೆ.