ಕುಶಾಲನಗರ, ಮೇ ೩೦: ಕುಶಾಲನಗರ ಕೋವಿಡ್ ಲಸಿಕಾ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಗುರುವಾರ ಜನರ ನೂಕು ನುಗ್ಗಲು ಕಂಡುಬAತು.

ಸ್ಥಳೀಯ ರೈತ ಸಹಕಾರ ಭವನದಲ್ಲಿ ಬೆಳಗಿನಿಂದ ಕೋವಿಡ್ ನಿಯಮಗಳನ್ನು ಪಾಲಿಸುವಲ್ಲಿ ನಾಗರಿಕರು ವಿಫಲವಾಗಿದ್ದು, ಗೋಚರಿಸಿತು.

ಸಮರ್ಪಕವಾದ ಮಾಹಿತಿಯ ಕೊರತೆಯಿಂದ ಕುಶಾಲನಗರ ರೈತ ಸಹಕಾರ ಭವನದಲ್ಲಿ ಕಂಡುಬAದ ಜನಜಾತ್ರೆಯಿಂದ ಕೇಂದ್ರದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಆದ್ಯತೆ ಮೇರೆಗೆ ಲಸಿಕೆ ಪಡೆಯಲು ನೋಡಲ್ ಅಧಿಕಾರಿಗಳ ಶಿಫಾರಸ್ಸು ಪತ್ರ ತರಲು ಆರೋಗ್ಯ ಅಧಿಕಾರಿಗಳ ಸೂಚನೆ ಕಾರಣ ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಇದುವರೆಗೆ ಶಿಸ್ತು ಬದ್ದವಾಗಿ ನಡೆಯುತ್ತಿದ್ದ ಕುಶಾಲನಗರ ಲಸಿಕಾ ಕೇಂದ್ರದಲ್ಲಿ ಗುರುವಾರ ಮಾತ್ರ ಜನತೆ ತಾಮುಂದು ನಾ ಮುಂದು ಎಂಬAತೆ ಕೇಂದ್ರಕ್ಕೆ ನುಗ್ಗುತ್ತಿದ್ದ ದೃಶ್ಯ ಗೋಚರಿಸಿತು.

ಲಸಿಕಾ ಕೇಂದ್ರದಲ್ಲಿ ಗೊಂದಲ ಸರಿಪಡಿಸಲು ಪೊಲೀಸರು ಮಧ್ಯಪ್ರವೇಶಿಸಿ ಗೊಂದಲ ಸರಿಪಡಿಸಲು ಯತ್ನಿಸಿದ ಪ್ರಸಂಗ ಕೂಡ ನಡೆಯಿತು.

೩೦೦ ಜನರಿಗೆ ಮಾತ್ರ ಲಸಿಕೆ ಲಭ್ಯವಿದ್ದು, ಉಳಿದ ಜನರಿಗೆ ಲಸಿಕೆ ಬಂದ ಮೇಲೆ ನೀಡಲಾಗುತ್ತದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾಹಿತಿ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಸೇವಾ ಭಾರತಿ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕರ್ತರು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜತೆ ಲಸಿಕೆ ನೀಡಲು ಕೈಜೋಡಿಸಿದ್ದು, ಗುರುವಾರ ಅವರ ಗೈರು ಹಾಜರಿ ಎದ್ದು ಕಂಡುಬAತು.