ಸೋಮವಾರಪೇಟೆ, ಮೇ ೩೦: ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ರೈತ ಸೇವಾ ಕೇಂದ್ರ ಮತ್ತು ರೈತ ಸಹಾಯವಾಣಿ ಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಕುಂದಳ್ಳಿ ದಿನೇಶ್ ತಿಳಿಸಿದ್ದಾರೆ.
ಕೋವಿಡ್-೧೯ರ ೨ನೇ ಅಲೆ ರಾಜ್ಯದಲ್ಲಿ ಜನರ ಜೀವ ಹಾಗೂ ಜೀವನದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿರುವುದು ನೋವಿನ ಸಂಗತಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಮಹಾಮಾರಿಯನ್ನು ಹಿಮ್ಮೆಟ್ಟಿಸಿ ಜನರನ್ನು ರಕ್ಷಿಸಲು ಹರಸಾಹಸ ಪಡುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಬಿಜೆಪಿ ರೈತ ಮೋರ್ಚಾದ ವತಿಯಿಂದ ರೈತರಿಗೆ ಸ್ಪಂದಿಸಿ ಸಹಾಯ ಸಹಕಾರ ಕೊಡಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಣಯಿಸಲಾಗಿದೆ ಎಂದರು.
ರೈತರ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವ ಹಾಗೂ ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿ ಯಿಂದ ಈ ಸೇವೆಯನ್ನು ಪ್ರಾರಂಭಿಸ ಲಾಗಿದೆ. ಸ್ಥಳೀಯ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ತೊಂದರೆ ಇದ್ದರೆ, ರೈತ ಮೋರ್ಚಾ ಸೇವಾ ಕೇಂದ್ರದ ಪದಾಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಳ್ಳ ಬಹುದಾಗಿದೆ ಎಂದು ದಿನೇಶ್ ತಿಳಿಸಿದ್ದಾರೆ.
ಇದರೊಂದಿಗೆ ಕೋವಿಡ್ ೧೯ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ವ್ಯಾಕ್ಸಿನ್, ಆಕ್ಸಿಜನ್ ಇದರ ಬಗ್ಗೆ ಮಾಹಿತಿ ಪಡೆಯಲು ರೈತ ಸಹಾಯವಾಣಿಯ ಕೆಳಕಂಡ ರೈತ ಮೋರ್ಚಾ ಪದಾಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಳ್ಳಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತ ಸೇವಾ ಕೇಂದ್ರಕ್ಕೆ ಸಂಬAಧಿಸಿದAತೆ ದಿನೇಶ್ ಕುಂದಳ್ಳಿ ೯೪೪೯೩೩೯೨೩೫, ಕಟ್ಟೇರ ಈಶ್ವರ್ ೯೪೮೧೪೩೧೮೧೮, ಜಗದೀಶ್ ತೊರೆನೂರು ೯೮೪೫೫೪೩೬೫೦, ಶಿವಚಾಳಿಯಂಡ ಜಗದೀಶ್ ೯೪೪೯೯೮೩೧೫೧, ನಂದ ಉತ್ತಯ್ಯ ೯೪೪೯೧೪೬೭೪೦, ರೈತ ಸಹಾಯವಾಣಿಗೆ ಸಂಬAಧಿಸಿದAತೆ ಶ್ರೀಕಾಂತ್ ಚೌಡ್ಲು ೯೪೮೧೩೪೦೪೯೯, ಕಬೀರ್ ದಾಸ್ ೯೪೪೮೨೪೫೩೬೧, ಸಿ.ಎ. ತಮ್ಮಯ್ಯ ೯೪೮೩೮೩೯೮೮೬, ಪೈಕೇರ ಮನೋಹರ್ ಮಾದಪ್ಪ ೯೪೪೮೩೨೫೭೦೨, ಕಿರಣ್ ಪೂಣಚ್ಚ ೯೩೪೨೧೬೩೧೬೩ ಅವರುಗಳನ್ನು ಸಂಪರ್ಕಿಸಬಹುದಾಗಿದೆ.