ಭಾಗಮಂಡಲ, ಮೇ ೩೦: ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಿಕೊಂಡಿರುವ ಪೊಲೀಸ್ ಇಲಾಖೆ ಕೂಡ ಕೋವಿಡ್ ಮಹಾಮಾರಿಯ ಚಿಕಿತ್ಸೆಗೆ ಇಲಾಖೆಯಿಂದ ವೈದ್ಯಕೀಯ ಪರಿಕರಗಳನ್ನು ವಿತರಿಸಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರುಗಳು ನೀಡಿರುವ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಉಡುಪಿ ನಕ್ಸಲ್ ನಿಗ್ರಹ ದಳದ ಕಮಾಂಡರ್ ಚೇತನ್, ಡಿವೈಎಸ್‌ಪಿ ನಿಖಿಲ್ ಅವರ ಮಾರ್ಗದರ್ಶನದಂತೆ ನಕ್ಸಲ್ ಪೀಡಿತ ಪ್ರದೇಶಗಳ ಆರೋಗ್ಯ ಕೇಂದ್ರಗಳಿಗೆ ಹಸ್ತಾಂತರ ಮಾಡಲಾಗಿದೆ.
ಅದರಂತೆ ಕೋವಿಡ್ ಸಾಂಕ್ರಾಮಿಕ ಸಂದರ್ಭ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಕಾನ್ಸಂಟ್ರೇಟರ್‌ಅನ್ನು ಭಾಗಮಂಡಲ ನಕ್ಸಲ್ ನಿಗ್ರಹ ದಳದ ಕಮಾಂಡೆAಟ್ ಪ್ರಸನ್ನ ಕುಮಾರ್ ಅವರು ಭಾಗಮಂಡಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬಿ.ಎನ್. ಪೊನ್ನಮ್ಮ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಭಾಗಮಂಡಲ ಎಎನ್‌ಎಫ್ ಕ್ಯಾಂಪ್‌ನ ಆರಕ್ಷಕ ಉಪ ನಿರೀಕ್ಷಕ ಶಶಿ ಕುಮಾರ್, ಎಎನ್‌ಎಫ್ ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.