
ವೀರಾಜಪೇಟೆ, ಮೇ ೩೦: ವೀರಾಜಪೇಟೆಯ ಸುಂಕದ ಕಟ್ಟೆ ಬಳಿಯಿರುವ ಮಕ್ಕಾ ಮಜೀದ್ ಮಸೀದಿಯಲ್ಲಿ ರಾತ್ರಿ ೮-೨೦ ರ ಸಮಯದಲ್ಲಿ ನಿಮಯ ಉಲ್ಲಂಘಿಸಿ ನಮಾಜ್ ಮಾಡುತ್ತಿದ್ದ ೭ ಮಂದಿಯ ವಿರುದ್ಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಇಲ್ಲಿನ ತಾಲೂಕು ಕಚೇರಿಯ ಕೊರೊನಾ ವಿಭಾಗದ ಪ್ಲೆöÊಯಿಂಗ್ ಸ್ಕಾ÷್ವಡ್ಗೆ ಬಂದ ಸುಳಿವಿನ ಮೇರೆ ತಂಡ ಮಸೀದಿ ಒಳಗೆ ಹೋಗಿ ತನಿಖೆ ನಡೆಸಿದಾಗ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದುದು ಕಂಡುಬAದಿದೆ. ನಮಾಝ್ ಮಾಡುತ್ತಿದ್ದ ಎಂ.ಎA. ಇಕ್ಬಾಲ್, ನಿಜಾಮುದ್ದೀನ್, ಎಂ.ಎಸ್.ಸಾಧಿಕ್, ಎಂ.ಹAಸ, ಎಂ.ಅನಾಸ್, ಎಂ.ಎA.ಹನೀಶ್ ಹಾಗೂ ಎಂ.ಎಸ್. ಸೌಕತ್ನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಮಸೀದಿಯಲ್ಲಿ ದಾಳಿ ಮಾಡುವ ಸಂದರ್ಭದಲ್ಲಿ ನಮಾಝ್ ಮಾಡುತ್ತಿದ್ದ ೭ ಮಂದಿ ಕೋವಿಡ್ -೧೯ ಮಾರ್ಗಸೂಚಿಯನ್ನು ಉಲ್ಲಂಘಿಸಿ ಮುಖಕ್ಕೆ ಮಾಸ್ಕ್ ಧರಿಸದೆ, ಸ್ಯಾನಿಟೈಸರ್ ಬಳಸದೆ ಸಾಮೂಹಿಕವಾಗಿ ಕುಳಿತು ಪ್ರಾರ್ಥನೆಯಲ್ಲಿ ತೊಡಗಿದ್ದರೆಂಬ ಆರೋಪದ ಮೇರೆ ರಾಷ್ಟಿçÃಯ ವಿಪತ್ತು ಕಾಯ್ದೆ ನಿರ್ವಹಣೆಯಡಿಯಲ್ಲಿ ಫೈಯಿಂಗ್ ಸ್ಕಾ÷್ವಡ್ ಪ್ರಕರಣದ ಮುಂದಿನ ಕ್ರಮಕ್ಕೆ ನಗರ ಪೊಲೀಸ್ ಠಾಣೆ ವಶಕ್ಕೆ ನೀಡಿದೆ. ತಾಲೂಕು ತಹಶೀಲ್ದಾರ್ ಯೋಗಾನಂದ ಅವರ ಮಾರ್ಗದರ್ಶನದಲ್ಲಿ ಸ್ಕಾ÷್ವಡ್ನ ಪ್ರದೀಪ್ ಕುಮಾರ್, ನಾಣಯ್ಯ, ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಸೋಮಯ್ಯ, ಚಾಲಕ ಲೋಕೇಶ್ ಮಸೀದಿ ದಾಳಿಯಲ್ಲಿ ಭಾಗವಹಿಸಿದ್ದರು.