ಸಿದ್ದಾಪುರ, ಮೇ ೩೦: ಕುಡಿಯುವ ನೀರಿನ ಟ್ಯಾಂಕ್ಗೆ ಹಲ್ಲಿಗಳು ಸತ್ತು ಬಿದ್ದು ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಯಾಗಿದೆ ಎಂದು ನೆಲ್ಲಿಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿಯ ನಿವಾಸಿಗಳು ಪಂಚಾಯಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಂ.ಜಿ. ಕಾಲೋನಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಅನ್ನು ಪಂಚಾಯಿತಿಯವರು ಶುಚಿಗೊಳಿಸದೇ ನಿರ್ಲಕ್ಷಿಸಿ ರುವುದರಿಂದ ಹಲ್ಲಿಗಳು ಸತ್ತು ಬಿದ್ದಿರುತ್ತದೆಂದು ನಿವಾಸಿಗಳು ಆರೋಪಿಸಿದ್ದಾರೆ. ಈ ಟ್ಯಾಂಕ್ ನಿಂದಲೇ ಈ ಭಾಗದ ನಿವಾಸಿಗಳು ಕುಡಿಯುವ ನೀರು ಬಳಸುತ್ತಿದ್ದಾರೆ. ಆದರೆ ಹಲ್ಲಿಗಳು ಸತ್ತು ಬಿದ್ದಿರುವ ವಿಚಾರವನ್ನು ಪಂಚಾಯಿತಿ ಸದಸ್ಯರುಗಳಿಗೆ ತಿಳಿಸಿದರು ಹಾಗೂ ಟ್ಯಾಂಕ್ ಅನ್ನು ಶುಚಿಗೊಳಿಸಿ ಕೊಡುವಂತೆ ಮನವಿ ಮಾಡಿ ಕೊಂಡರೂ ನಿರ್ಲಕ್ಷö್ಯ ಆರೋಪಿಸಿದ್ದಾರೆ. ಈ ಟ್ಯಾಂಕ್ ನಿಂದಲೇ ಈ ಭಾಗದ ನಿವಾಸಿಗಳು ಕುಡಿಯುವ ನೀರು ಬಳಸುತ್ತಿದ್ದಾರೆ. ಆದರೆ ಹಲ್ಲಿಗಳು ಸತ್ತು ಬಿದ್ದಿರುವ ವಿಚಾರವನ್ನು ಪಂಚಾಯಿತಿ ಸದಸ್ಯರುಗಳಿಗೆ ತಿಳಿಸಿದರು ಹಾಗೂ ಟ್ಯಾಂಕ್ ಅನ್ನು ಶುಚಿಗೊಳಿಸಿ ಕೊಡುವಂತೆ ಮನವಿ ಮಾಡಿ ಕೊಂಡರೂ ನಿರ್ಲಕ್ಷö್ಯ ವಹಿಸುತ್ತಿದ್ದಾರೆಂದು ನಿವಾಸಿಗಳು ದೂರಿದ್ದಾರೆ.
ಇದಲ್ಲದೆ, ಸಾರ್ವಜನಿಕರ ಉಪಯೋಗಕ್ಕಾಗಿ ತಾಲೂಕು ಪಂಚಾಯಿತಿಯ ವತಿಯಿಂದ ರೂ. ೧೪ ಲಕ್ಷ ವೆಚ್ಚದಲ್ಲಿ ಎಂ.ಜಿ. ಕಾಲೋನಿಯಲ್ಲಿ ನಿರ್ಮಾಣ ಮಾಡಿರುವ ಟ್ಯಾಂಕ್ ಅನ್ನು ಜನಪ್ರತಿನಿಧಿಗಳು ಉದ್ಘಾಟಿಸಿ ೨ ತಿಂಗಳು ಕಳೆದರೂ, ಕುಡಿಯುವ ನೀರು ಸರಬರಾಜು ಮಾಡದೇ ಪಂಚಾಯಿತಿ ನಿರ್ಲಕ್ಷö್ಯ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಹೊಸ ಟ್ಯಾಂಕ್ ನಿಷ್ಪçಯೋಜಕವಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಮುತುವರ್ಜಿ ವಹಿಸಿ ಸಮಸ್ಯೆಗೆ ಸ್ಪಂದಿಸಬೇಕಾಗಿ ನಿವಾಸಿಗಳು ಒತ್ತಾಯಿಸಿದ್ದಾರೆ.