ಮಡಿಕೇರಿ, ಮೇ ೩೦: ಸುಂಟಿಕೊಪ್ಪ ಬಳಿಯ ಹರದೂರು ನಿವಾಸಿ ವಕೀಲರಾಗಿದ್ದ ಜೆ.ಆರ್. ದೀಪಕ್ (೪೨) ಕೋವಿಡ್ ಸೋಂಕಿನಿAದ ಮೃತರಾಗಿದ್ದಾರೆ.

ದೀಪಕ್ ಅವರು ಅವಿವಾಹಿತರಾಗಿದ್ದು, ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ದೀಪಕ್ ಅವರ ನಿಧನಕ್ಕೆ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಕೆ.ಡಿ. ದಯಾನಂದ, ಕಾರ್ಯದರ್ಶಿ ಎಂ.ಕೆ. ಅರುಣ್ ಕುಮಾರ್ ಮತ್ತು ಸದಸ್ಯರು ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.