ಮಡಿಕೇರಿ, ಮೇ ೩೦: ಕೋವಿಡ್ ತಡೆ ಹಾಗೂ ನಿರ್ವಹಣೆ ಕುರಿತಾಗಿ ಟಿ. ಶೆಟ್ಟಿಗೇರಿ ಗ್ರಾ.ಪಂ. ಟಾಸ್ಕ್ ಫೋರ್ಸ್ ಸಮಿತಿ ಸಭೆ ಇತ್ತೀಚೆಗೆ ಅಧ್ಯಕ್ಷೆ ಕೆ.ಯು. ದೇವಮ್ಮಾಜಿ ಹಾಗೂ ಪಿ.ಡಿ.ಓ. ಕವಿತಾ ಎಂ.ಎಲ್. ಮುಂದಾಳತ್ವದಲ್ಲಿ ನಡೆಯಿತು.

ಎಲ್ಲಾ ಆಶಾ ಕಾರ್ಯಕರ್ತೆ ಯರಿಗೆ ಅಂಗನವಾಡಿ ಕಾರ್ಯಕರ್ತೆ ಯರಿಗೆ ಮತ್ತು ಶಿಕ್ಷಕರಿಗೆ ಹಾಗೂ ಕೋವಿಡ್ ಟಾಸ್ಕ್ಫೋರ್ಸ್ ಸದಸ್ಯರಿಗೆ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ವಿತರಿಸಲಾಯಿತು. ಪ್ರತೀ ಮಂಗಳ ವಾರ, ಗುರುವಾರ, ಶನಿವಾರ ಟಿ. ಶೆಟ್ಟಿಗೇರಿ ಪಟ್ಟಣವನ್ನು ಸ್ಯಾನಿಟೈಸ್ ಮಾಡುವಂತೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ರೂ. ೫ ಸಾವಿರಗಳನ್ನು ಗೌರವಧನ ನೀಡಲು ನಿರ್ಣಯ ಕೈಗೊಳ್ಳಲಾಯಿತು. ಹೋಂಐಸೋಲೇ ಶನ್‌ನಲ್ಲಿ ಇದ್ದಂತಹ ಬಡಕುಟುಂಬ ಗಳಿಗೆ ಪಂಚಾಯಿತಿ ವತಿಯಿಂದ ಆಹಾರ ಕಿಟ್‌ಗಳನ್ನು ವಿತರಿಸ ಲಾಯಿತು. ಮುಂದೆಯೂ ವಿತರಿಸಲು ನಿರ್ಧರಿಸಿತು. ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗಡಿ ವರ್ತಕರಿಗೆ ಖಡ್ಡಾಯವಾಗಿ ಕೋವಿಡ್ ಪರೀಕ್ಷಾ ವರದಿಯನ್ನು ತಮ್ಮ ಮಳಿಗೆಯ ಮುಂದೆ ಬಿತ್ತರಿಸ ಬೇಕೆಂದು ತಿಳುವಳಿಕೆ ನೀಡಬೇಕೆಂದು ಸಮಿತಿಯು ನಿರ್ಣಯ ಕೈಗೊಂಡಿತು.

ಸಭೆಯಲ್ಲಿ ಸದಸ್ಯರುಗಳಾದ ಎಂ.ಎನ್. ಸುಮಂತ್, ಸಿ.ಜೆ. ರಂಜಿ, ಕೆ.ಪಿ. ಪ್ರಭು, ಕೆ.ಬಿ. ಕೃಷ್ಣ, ಮನ್ನೇರ ಅಜಿತ್, ಹೇಮಾವತಿ ಎಂ.ಎನ್. ಸರಿತ ಸಿ.ಟಿ., ವನಿತ ಎಂ.ಡಿ., ಪಂಚಾಯಿತಿ ಸಿಬ್ಬಂದಿಗಳಾದ ಕಾಳಪ್ಪ ಕೆ.ಡಿ., ಧನು ಬಿ.ಆರ್., ಪ್ರಶಾಂತ್ ಸಿ.ಸಿ., ಶರೀನ್, ಸುಂದರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.