ಸೋಮವಾರಪೇಟೆ, ಮೇ ೩೦: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ೭ ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಕ್ಷೇತ್ರದಾದ್ಯಂತ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸುವ ಮೂಲಕ ೭ನೇ ವರ್ಷಾಚರಣೆ ಮಾಡಲಾಯಿತು.

ಇಲ್ಲಿನ ಮಹಿಳಾ ಸಮಾಜದಲ್ಲಿ ತೆರೆಯಲಾಗಿರುವ ಗಂಟಲು ದ್ರವ ಮಾದರಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನಗರ ಬಿಜೆಪಿಯಿಂದ ಎನ್-೯೫ ಮಾಸ್ಕ್ ವಿತರಿಸಲಾಯಿತು. ನಗರಾಧ್ಯಕ್ಷ ಸೋಮೇಶ್, ಪ್ರಮುಖರಾದ ಕಿಬ್ಬೆಟ್ಟ ಮಧು, ಜಗನ್ನಾಥ್, ಶರತ್‌ಚಂದ್ರ, ನೇಗಳ್ಳೆ ಜೀವನ್ ಅವರುಗಳು ಉಪಸ್ಥಿತರಿದ್ದರು.

ಬಿಜೆಪಿ ಸಾಮಾಜಿಕ ಜಾಲತಾಣದ ವತಿಯಿಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ರೋಗಿಗಳು, ಅವರ ಕುಟುಂಬದವರು ಮತ್ತು ಸಾರ್ವಜನಿಕರಿಗೆ ಮಾಸ್ಕ್ ನೀಡಲಾಯಿತು. ಜಾಲತಾಣದ ಸಂಚಾಲಕ ಪ್ರಿಜೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪಟ್ಟಣದಲ್ಲಿರುವ ಗಂಟಲು ದ್ರವ ಮಾದರಿ ಪರೀಕ್ಷಾ ಕೇಂದ್ರ, ಲಸಿಕೆ ವಿತರಣೆ ಕೇಂದ್ರ, ಸಂತೆ ನಡೆಯುವ ಆರ್‌ಎಂಸಿ ಪ್ರಾಂಗಣ, ಪೊಲೀಸ್ ಠಾಣೆಗಳಿಗೆ ಸ್ಯಾನಿಟೈಸ್ ಮಾಡಲಾಯಿತು. ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರಿದ್ದರು.

ಸೋಮವಾರಪೇಟೆ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಚೌಡ್ಲು ಹಾಗೂ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪಟ್ಟಣದಲ್ಲಿರುವ ಗಂಟಲು ದ್ರವ ಮಾದರಿ ಪರೀಕ್ಷಾ ಕೇಂದ್ರ, ಲಸಿಕೆ ವಿತರಣೆ ಕೇಂದ್ರ, ಸಂತೆ ನಡೆಯುವ ಆರ್‌ಎಂಸಿ ಪ್ರಾಂಗಣ, ಪೊಲೀಸ್ ಠಾಣೆಗಳಿಗೆ ಸ್ಯಾನಿಟೈಸ್ ಮಾಡಲಾಯಿತು. ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರಿದ್ದರು.

ಸೋಮವಾರಪೇಟೆ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಚೌಡ್ಲು ಹಾಗೂ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸಿದ್ದಾಪುರ: ಬಿಜೆಪಿ ಶಕ್ತಿಕೇಂದ್ರ ವತಿಯಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಸರಕಾರವು ಎರಡನೇ ವರ್ಷ ಪೂರೈಸಿದ ದಿನವನ್ನು ಸಂಭ್ರಮಾಚರಣೆಯ ಬದಲಿಗೆ ಸೇವಾ ಸಂಘಟನ್ (ಸೇವೆಯೇ ಸಂಘಟನೆ) ಕಾರ್ಯಕ್ರಮದ ಮೂಲಕ ಸಿದ್ದಾಪುರ ಬಸ್ ನಿಲ್ದಾಣ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಸ್ಕ್ ವಿತರಣೆ ಮತ್ತು ಹಣ್ಣು ಹಂಪಲು ವಿತರಣೆ ನಡೆಸುವ ಮೂಲಕ ಆಚರಿಸಲಾಯಿತು.

ಈ ಸಂದÀರ್ಭ ಮಹಾಶಕ್ತಿ ಕೇಂದ್ರದ ಮನೋಹರ್, ಸಿದ್ದಾಪುರ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರವೀಣ್, ಗಿರೀಶ್, ಪಕ್ಷದ ಕಾರ್ಯಕರ್ತರು, ಓಬಿಸಿ ಸಿದ್ದಾಪುರ ಮೋರ್ಚಾದ ಅಧ್ಯಕ್ಷ ರೂಬೇಶ್, ಓಬಿಸಿ ತಾಲೂಕು ಸದಸ್ಯ ಕಿಶೋರ್, ತಾಲೂಕು ಉಪಾಧ್ಯಕ್ಷೆ ರಮ್ಯ, ಬೂತ್ ಅಧ್ಯಕ್ಷರುಗಳಾದ ಶಾಜಿ, ರಾಜೇಶ್, ಸುರೇಶ್, ಪದಾಧಿಕಾರಿಗಳು, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಗಣಪತಿ, ಸದಸ್ಯರುಗಳು ಹಾಜರಿದ್ದರು.ಸಿದ್ದಾಪುರ: ಬಿಜೆಪಿ ಶಕ್ತಿಕೇಂದ್ರ ವತಿಯಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಸರಕಾರವು ಎರಡನೇ ವರ್ಷ ಪೂರೈಸಿದ ದಿನವನ್ನು ಸಂಭ್ರಮಾಚರಣೆಯ ಬದಲಿಗೆ ಸೇವಾ ಸಂಘಟನ್ (ಸೇವೆಯೇ ಸಂಘಟನೆ) ಕಾರ್ಯಕ್ರಮದ ಮೂಲಕ ಸಿದ್ದಾಪುರ ಬಸ್ ನಿಲ್ದಾಣ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಸ್ಕ್ ವಿತರಣೆ ಮತ್ತು ಹಣ್ಣು ಹಂಪಲು ವಿತರಣೆ ನಡೆಸುವ ಮೂಲಕ ಆಚರಿಸಲಾಯಿತು.

ಈ ಸಂದÀರ್ಭ ಮಹಾಶಕ್ತಿ ಕೇಂದ್ರದ ಮನೋಹರ್, ಸಿದ್ದಾಪುರ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರವೀಣ್, ಗಿರೀಶ್, ಪಕ್ಷದ ಕಾರ್ಯಕರ್ತರು, ಓಬಿಸಿ ಸಿದ್ದಾಪುರ ಮೋರ್ಚಾದ ಅಧ್ಯಕ್ಷ ರೂಬೇಶ್, ಓಬಿಸಿ ತಾಲೂಕು ಸದಸ್ಯ ಕಿಶೋರ್, ತಾಲೂಕು ಉಪಾಧ್ಯಕ್ಷೆ ರಮ್ಯ, ಬೂತ್ ಅಧ್ಯಕ್ಷರುಗಳಾದ ಶಾಜಿ, ರಾಜೇಶ್, ಸುರೇಶ್, ಪದಾಧಿಕಾರಿಗಳು, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಗಣಪತಿ, ಸದಸ್ಯರುಗಳು ಹಾಜರಿದ್ದರು.ಗೋಣಿಕೊಪ್ಪಲು: ಪ್ರಧಾನಿ ನರೇಂದ್ರ ಮೋದಿ ಯವರ ಕೇಂದ್ರ ಸರ್ಕಾರ ಯಶಸ್ವಿ ಏಳನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಮುಂದಾಳತ್ವದಲ್ಲಿ ಪ್ರತಿ ಬೂತ್‌ನಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕೊರೊನಾ ಸೋಂಕಿನ ವ್ಯಕ್ತಿಯ ಮನೆಗಳಿಗೆ ಸ್ಯಾನಿಟೈಸ್ ಸಿಂಪಡಣೆ, ನಿರ್ಗತಿಕರಿಗೆ ಮಧ್ಯಾಹ್ನದ ಭೋಜನ, ಮಾಸ್ಕ್ ವಿತರಣೆ, ಗಿಡ ನೆಡುವುದು, ಆಹಾರ ಕಿಟ್ ವಿತರಣೆ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳು ನಡೆದವು.

ಗೋಣಿಕೊಪ್ಪಲುವಿನಲ್ಲಿ ಆಯೋಜಿಸಲಾಗಿದ್ದ ಭೋಜನ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಡಲ ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಕೇಂದ್ರ ಸರ್ಕಾರ ಏಳನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈ ಸಂದರ್ಭದಲ್ಲಿ ಸಂಭ್ರಮ ಆಚರಣೆಯ ಕಾರ್ಯಕ್ರಮ ಆಯೋಜನೆ ಮಾಡಬೇಕಾಗಿತ್ತು. ಆದರೆ ದೇಶದೆಲ್ಲೆಡೆ ಕೋವಿಡ್ ಇರುವುದರಿಂದ ಸಂಭ್ರಮ ಬದಲಾಗಿ ‘ಸೇವೆಯೇ ಸಂಘಟನೆ’ ಎಂಬ ಹೆಸರಿನಲ್ಲಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿದ್ದಾರೆ ಎಂದರು.

ಈ ವೇಳೆ ಬಿಜೆಪಿ ಒಬಿಸಿ ಘಟಕದ ಅಧ್ಯಕ್ಷ ಕೆ. ರಾಜೇಶ್, ಜಿಲ್ಲಾ ಬಿಜೆಪಿ ಮುಖಂಡ ಚೆಪ್ಪುಡೀರ ಮಾಚು, ಗೋಣಿಕೊಪ್ಪ ಶಕ್ತಿ ಕೇಂದ್ರದ ಪ್ರಮುಖ್ ಮಂಜು ರೈ, ಪಂಚಾಯಿತಿ ಸದಸ್ಯರಾದ ಬಿ.ಎನ್. ಪ್ರಕಾಶ್, ಜಿ.ಕೆ. ಗೀತಾ, ರಾಮಕೃಷ್ಣ, ವಿವೇಕ್, ಚೈತ್ರ, ಬಿಜೆಪಿ ಪ್ರಮುಖರಾದ ಅಬ್ದುಲ್ ಜಲೀಲ್, ಮಂಜು, ಜ್ಯೋತಿ, ಚೇತನ್, ಸುಬ್ರಮಣಿ, ಮುಂತಾದವರು ಉಪಸ್ಥಿತರಿದ್ದರು.*ಗೋಣಿಕೊಪ್ಪ, ಮೇ ೩೦: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸವಾಲಿನ ದಿನಗಳನ್ನು ಎದುರಿಸಿ ಏಳು ವರ್ಷಗಳನ್ನು ಪೂರೈಸಿ ಮುಂದಿನ ಹೆಜ್ಜೆ ಇಡುತ್ತಿರುವ ಹಿನ್ನೆಲೆ ಗೋಣಿಕೊಪ್ಪ ಶಕ್ತಿ ಕೇಂದ್ರದ ವತಿಯಿಂದ ಮಾಸ್ಕ್ ಹಾಗೂ ಸಾಬೂನುಗಳನ್ನು ವಿತರಿಸಲಾಯಿತು.

ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ ಅವರ ನೇತೃತ್ವದಲ್ಲಿ ಗೋಣಿಕೊಪ್ಪ ಪಟ್ಟಣದ ೪ನೇ ವಿಭಾಗದ ಮನೆಗಳಿಗೆ ತೆರಳಿ ಪ್ರತಿ ಕುಟುಂಬಗಳಿಗೆ ಮಾಸ್ಕ್ ಮತ್ತು ಸಾಬೂನುಗಳನ್ನು ನೀಡಿ ಕೊರೊನಾ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ವಿವೇಕ್‌ರಾಯ್ಕರ್, ಸಹ ಪ್ರಮುಖ್ ಮಂಜು, ಕಾರ್ಯಕರ್ತರಾದ ಸುದೀಶ್ ರೈ, ಮದನ್‌ಶೆಟ್ಟಿ, ಆಯೂಬ್‌ಖಾನ್, ಜ್ಯೋತಿ, ಮನೋಜ್ ಉಪಸ್ಥಿತರಿದ್ದರು.ಮಡಿಕೇರಿ: ನರೇಂದ್ರ ಮೋದಿ ಅವರು ೭ನೇ ವರ್ಷದ ಆಡಳಿತ ಪೂರೈಸಿದ ಸಲುವಾಗಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೨ನೇ ವಿಭಾಗದ ನ್ಯಾಯಬೆಲೆ ಅಂಗಡಿಯ ಮುಂದೆ ಸ್ವಚ್ಛತಾ ಕಾರ್ಯಕ್ರಮ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು. ಈ ಸಂದರ್ಭ ವಾರ್ಡ್ ಅಧ್ಯಕ್ಷ ಅಮ್ಮತ್ತಿರ ಸುರೇಶ್, ಪ್ರಮುಖ್ ಮಧುಕುಮಾರ್, ಕಿಶನ್, ಗ್ರಾ.ಪಂ. ಸದಸ್ಯೆ ಅಮ್ಮತ್ತಿರ ಆರತಿ ಸುರೇಶ್, ನ್ಯಾಯಬೆಲೆ ಅಂಗಡಿಯ ಜಾಲಜಾಕ್ಷಿ, ಪೊನ್ನಂಪೇಟೆ ಮಹಿಳಾ ಮೋರ್ಚಾದ ಕಾರ್ಯದರ್ಶಿ ಪಾರ್ವತಿ ಮತ್ತು ಎಸ್‌ಸಿ ಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.*ಸಿದ್ದಾಪುರ: ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಯಲ್ಲಿ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಚೆನ್ನಯ್ಯನಕೋಟೆ ವ್ಯಾಪ್ತಿಯ ಗುಡ್ಲೂರಿನಲ್ಲಿ ಕಿಟ್ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಕೋವಿಡ್ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಸ್ ವಿತರಿಸಲಾಯಿತು. ಈ ಸಂದರ್ಭ ಶಕ್ತಿ ಕೇಂದ್ರದ ಅಧ್ಯಕ್ಷ ಅಪ್ಪು, ಉಪಾಧ್ಯಕ್ಷ ಎಂ.ಪಿ. ಚಂಗಪ್ಪ, ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಸದಸ್ಯರಾದ ರತನ್, ಅರುಣ ಮೇಕೇರಿರ, ರೈತ ಘಟಕದ ಅಧ್ಯಕ್ಷ ಅಪ್ಪಾಜಿ, ಬೂತ್ ಅಧ್ಯಕ್ಷÀ ರಾಮಚಂದ್ರ, ಮಹಿಳಾ ಮೋರ್ಚಾ ಕಾರ್ಯದರ್ಶಿ ವಿಜಯಲಕ್ಷಿ÷್ಮ ಬಿ.ಜಿ. ಮತ್ತಿತರರು ಹಾಜರಿದ್ದರು.

ಇದೇ ಸಂದರ್ಭ ಬೇವಿನ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸುವುದರೊಂದಿಗೆ ಪ್ರಧಾನಮಂತ್ರಿಗಳ ಕಾರ್ಯಗಳಿಗೆ ಜಯ ಸಿಗಲಿ ಎಂದು ಪ್ರಾರ್ಥಿಸಿದರು.