ನಿವೃತ್ತ ಕರ್ನಲ್ ರಾಮನ್- ಹಿರಿಯ ವ್ಯವಸ್ಥಾಪಕ ಯೂನಿಟ್ ರನ್ ಕ್ಯಾಂಟೀನ್(ಗೋಲ್ಡನ್ ಪಾಮ್)
ಕರ್ನಾಟಕ ಹಾಗೂ ಕೇರಳ ಆರ್ಮಿ ಉಪ ವಲಯ, ಬೆಂಗಳೂರು, ಅವರಿಗೆ ಬರೆದ ಪತ್ರ
ತಾ.೨೮ ರಂದು ಮಡಿಕೇರಿ ಹಾಗೂ ವೀರಾಜಪೇಟೆಯ ಮಿಲಿಟರಿ ಕ್ಯಾಂಟೀನಿನಲ್ಲಿ ಗ್ರಾಹಕರ ಅತೀ ಉದ್ದದ ಸಾಲು ಕಂಡುಬAತು. ಈ ಕುರಿತು ವರದಿ ಮಾಡಲೆಂದು ತೆರಳಿದ್ದ ಈರ್ವರು ಪತ್ರಕರ್ತರ ಮೇಲೆ ಕೆಲವರು ದುರ್ವತನೆಯಿಂದ ನಡೆದುಕೊಂಡರು.
ಬೆಂಗಳೂರಿನ ಗೋಲ್ಡನ್ ಪಾಮ್ ಕ್ಯಾಂಟೀನಿನ ಉಸ್ತುವಾರಿ ಅಧಿಕಾರಿಗಳು ಮಡಿಕೇರಿ ಹಾಗೂ ವೀರಾಜಪೇಟೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಮಿಲಿಟರಿ ಕ್ಯಾಂಟೀನ್ಗಳಿಗೂ ತಿಂಗಳ ಆರಂಭದಲ್ಲೇ ದಿನಸಿ ಹಾಗೂ ಮದ್ಯವನ್ನು ವಿತರಸುವ ವ್ಯವಸ್ಥೆ ಮಾಡಿದ್ದರೆ, ವೀರಾಜಪೇಟೆಯಲ್ಲಿನ ಜನಜಂಗುಳಿ ಹಾಗೂ ಮಡಿಕೇರಿಯಲ್ಲಿನ ಘಟನೆ ನಡೆಯುತ್ತಿರಲಿಲ್ಲ.
ಘಟನೆಗೆ ಸಂಬAಧಿಸಿದAತೆ ವೀಡಿಯೋದಲ್ಲಿ ಕಂಡ ಹಾಗೆ, ಗ್ರಾಹಕನೋರ್ವ ಮಹಿಳಾ ಪತ್ರಕರ್ತರ ಮೇಲೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುತ್ತಾನೆ.
ಮೊದಲನೆಯದಾಗಿ ಮಡಿಕೇರಿಯಲ್ಲಿನ ಮಿಲಿಟರಿ ಕ್ಯಾಂಟೀನ್ ನಿರ್ಬಂಧಿತ ಮಿಲಿಟರಿ ಪ್ರದೇಶವಲ್ಲ. ಅದೊಂದು ಸಾರ್ವಜನಿಕ ಸ್ಥಳ. ಪತ್ರಕರ್ತರಿಗೆ ಇಲ್ಲಿಗೆ ತೆರಳಿ ವರದಿ ಮಾಡುವ ಎಲ್ಲಾ ಹಕ್ಕು ಕೂಡ ಇದೆ. ಮಾಜಿ ಸೈನಿಕರು ಕ್ಯಾಂಟೀನಿನಿAದ ತಮಗೆ ದೊರಕಬೇಕಾದ ಸೌಲಭ್ಯಗಳ ಸಂಬAಧ ಕೆಲಕಾಲದಿಂದ ಅನುಭವಿಸುತ್ತಿರುವ ತೊಂದರೆಗಳ ಕುರಿತು ವರದಿ ಮಾಡುವ ಹಕ್ಕು ಪತ್ರಕರ್ತರಿಗಿದೆ.
ಕೊಡಗು ಜಿಲ್ಲೆಯು ಸೈನಿಕರ ನಾಡಾಗಿದ್ದು, ಬಹಳಷ್ಟು ಸೇನಾ ಅಧಿಕಾರಿಗಳನ್ನು ದೇಶಕ್ಕೆ ನೀಡಿರುವ, ನೀಡುತ್ತಿರುವ ಹೆಮ್ಮೆ ಜಿಲ್ಲೆಯದ್ದು. ಆದರೂ ಕೂಡ, ಜಿಲ್ಲೆಯನ್ನು ನಿರ್ಲಕ್ಷಿಸಿ ಜಿಲ್ಲೆಯ ಮಿಲಿಟರಿ ಕ್ಯಾಂಟೀನ್ಗಳಿಗೆ ದಿನಸಿ ಹಾಗೂ ಮದ್ಯವನ್ನು ಪ್ರತೀ ತಿಂಗಳ ಮಧ್ಯ ಅಥವಾ ಕೊನೆಯಲ್ಲಿ ಬೆಂಗಳೂರಿನ ದಾಸ್ತಾನುವಿನಿಂದ ಸರಬರಾಜು ಮಾಡಲಾಗುತ್ತಿದೆ.
ಕೊಡಗಿನಲ್ಲಿ ಲಾಕ್ಡೌನ್ ನಿಯಮ ಕಟ್ಟುನಿಟ್ಟಾಗಿದ್ದು, ವಾರದ ೩ ದಿನಗಳು ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬAಧ ಬೆಂಗಳೂರಿನ ಗೋಲ್ಡನ್ ಪಾಮ್ ಕ್ಯಾಂಟೀನ್ ಅವರಿಗೆ ಗೊತ್ತಿದ್ದು, ತಿಂಗಳ ಮೊದಲ ವಾರದಲ್ಲೇ ದಿನಸಿ, ಮದ್ಯ ದಾಸ್ತಾನನ್ನು ಜಿಲ್ಲೆಗೆ ತಲುಪಿಸಬಹುದಿತ್ತು. ಇದರಿಂದ ಘಟನೆಯನ್ನು ತಪ್ಪಿಸಬಹುದಿತ್ತು.
ಈ ಮಾಹಿತಿಯನ್ನು ಕರ್ನಾಟಕ ಹಾಗೂ ಕೇರಳ ಆರ್ಮಿ ಉಪ ವಲಯದ ಅಧಿಕಾರಿಗೆ ತಲುಪಿಸಿ ಇಂತಹ ಘಟನೆಗಳಾಗದಂತೆ ಕ್ರಮ ಕೈಗೊಳ್ಳಬೇಕಿದೆ.
-ಮಂದೇಟಿರ ಎನ್ ಸುಬ್ರಮಣಿ-ಏರ್ ವೆಟರನ್ ಹಾಗೂ ವಕೀಲ, ಟಿಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಕಾನೂನು ಸಲಹೆಗಾರ, ಮೈಸೂರು ಪೂರ್ವ