ಮಡಿಕೇರಿ, ಮೇ ೩೦: ಹಲವಾರು ವರ್ಷಗಳಿಂದ ಮಡಿಕೇರಿಯಲ್ಲಿ ಆ್ಯಂಬ್ಯುಲೆನ್ಸ್ ಸೇವೆ ಒದಗಿಸುತ್ತಿದ್ದ ಜೀನತ್ ಹಸನಬ್ಬ (೭೨) ನಿಧನ ಹೊಂದಿದರು. ನಗು ಮುಖದ ಸಮಾಜ ಸೇವಕ ತಮ್ಮ ಆ್ಯಂಬ್ಯುಲೆನ್ಸ್ ಮೂಲಕ ಸಾವಿರಾರು ರೋಗಿಗಳ ಪಾಲಿಗೆ ಆಪತ್ಭಾಂದವರಾಗಿದ್ದರು.
ಸAತಾಪ
ಜಾತಿ, ಮತ ಬೇಧವಿಲ್ಲದೆ ಸಾವಿರಾರು ಅಫಘಾತ ಗಾಯಾಳುಗಳನ್ನು ತುರ್ತು ಚಿಕಿತ್ಸೆಗೆ ಸಾಗಿಸುವಲ್ಲಿ, ಮತ್ತು ಕೊಳೆತ ಮೃತ ದೇಹಗಳನ್ನು ಅಗತ್ಯ ಸ್ಥಳಗಳಿಗೆ ಸ್ವತಃ ಕೈಜೋಡಿಸಿ ತನ್ನ ಬಾಡಿಗೆ ವಾಹನದಲ್ಲಿ ಸಾಗಿಸಿ ಜೀವನದಲ್ಲಿ ಮಾ£ವೀಯತೆ ಮೆರೆದು, ಸಾರ್ಥಕತೆ ಕಂಡ ಹಸನ್ಮುಖಿ ಜೀನತ್ ಹಸನಬ್ಬ ರವರ ಸಾವಿಗೆ ಕೊಡಗು ಗೌಡ ಫೆಡರೇಶನ್ ಅಧ್ಯಕ್ಷ ಸೂರ್ತಲೆ ಸೋಮಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.
* ಹಸನಬ್ಬ ಅವರ ನಿಧನಕ್ಕೆ ಮಡಿಕೇರಿ ಪ್ರವಾಸಿಗರ ಕಾರು ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ತೆಕ್ಕಡ ಸಂತು ಕಾರಿಯಪ್ಪ ಹಾಗೂ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.