ಗೋಣಿಕೊಪ್ಪಲು, ಮೇ ೩೦: ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಿಗಬೇಕಾದ ಮಾಸಿಕ ಗೌರವ ಧನವನ್ನು ಕೂಡಲೆ ಕರ್ನಾಟಕ ಸರ್ಕಾರ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರರಾದ ಕೇಚಮಾಡ ಸರಿತಾ ಪೂಣಚ್ಚ ಆಗ್ರಹಿಸಿದ್ದಾರೆ. ಫ್ರಂಟ್‌ಲೈನ್ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕಳೆದ ಮಾರ್ಚ್ ತಿಂಗಳಿನಿAದ ಸಿಗಬೇಕಾದ ಗೌರವ ಇನ್ನೂ ಲಭಿಸಿಲ್ಲ. ಇದರಿಂದಾಗಿ ಇವರ ಕುಟುಂಬ ನಿರ್ವಹಣೆ ಕಷ್ಟದಲ್ಲಿ ಸಿಲುಕಿದೆ. ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕೋವಿಡ್ ಸಮಯದಲ್ಲಿ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ತೆರಳಿ ಸೋಂಕಿತ ವ್ಯಕ್ತಿಯ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಸಿಗುವ ಮಾಸಿಕ ವೇತನ ಅತ್ಯಲ್ಪವಾಗಿದೆ. ಅದು ಕೂಡ ನ್ಯಾಯಯುತವಾಗಿ ದೊರೆಯುತ್ತಿಲ್ಲವೆಂದರೆ, ನಮ್ಮ ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಇವರ ಕಷ್ಟಕ್ಕೆ ಸ್ಪಂದಿಸಿ ಅವರಿಗೆ ಸಿಗಬೇಕಾದ ಮಾಸಿಕ ಗೌರವ ಧನ ನೀಡುವಂತೆ ಸರಿತಾ ಆಗ್ರಹಿಸಿದ್ದಾರೆ.