ಕಡಂಗ, ಮೇ ೩೦: ಶೀಘ್ರದಲ್ಲೇ ಮಳೆಗಾಲ ಆಗಮಿಸಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಮತ್ತು ಅಧಿಕಾರಿ ವರ್ಗ ವರ್ಷಂಪ್ರತಿ ಪ್ರವಾಹಕ್ಕೆ ತುತ್ತಾಗುವ ಬೇತ್ರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲಿನ ಮಸೀದಿ ರಸ್ತೆಯಲ್ಲಿ ಸಾಗಿ ಗ್ರಾಮಸ್ಥರನ್ನು ಭೇಟಿ ಮಾಡಿ ಮುನ್ನೆಚ್ಚರಿಕೆ ಹಾಗೂ ಅಗತ್ಯವಾಗಿ ಆಗಬೇಕಾದ ಕಾಮಗಾರಿ ಬಗ್ಗೆ ಚರ್ಚಿಸಿದರು. ಇದೇ ಸಂದರ್ಭ ಗ್ರಾಮಸ್ಥರು ಪ್ರವಾಹ ಸಂದರ್ಭ ಮುಳುಗಡೆಯಾಗುವ ಸಾರ್ವಜನಿಕ ರಸ್ತೆಯ ಎತ್ತರ ಹೆಚ್ಚಿಸಲು ಹಾಗೂ ಪ್ರವಾಹದ ನೀರು ಮನೆಗಳಿಗೆ ನುಗ್ಗದಂತೆ ಅಲ್ಲಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಈ ಸಂದರ್ಭ ಉಪ ವಿಭಾಗಾಧಿಕಾರಿಗಳು, ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ, ಕಂದಾಯ ನಿರೀಕ್ಷಕರು ಇತರ ಅಧಿಕಾರಿಗಳಿದ್ದರು.
-ನೌಫಲ್