ಆಲೂರು-ಸಿದ್ದಾಪುರ, ಮೇ ೨೯: ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬಂದ ವಿಶೇಷಚೇತನ, ಮನೆ ಯಲ್ಲಿರುವ ರೋಗಿಗಳು ಮತ್ತು ಹಿರಿಯರಿಗೆ ವಾಹನದ ವ್ಯವಸ್ಥೆ ಮಾಡಿದರು. ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದ್ದು ಶುಕ್ರವಾರ ರೋಟರಿ ಕ್ಲಬ್ ವತಿಯಿಂದ ಮನೆಯ ಆಶ್ರಯದಲ್ಲಿರುವ ವಿಶೇಷಚೇತನ, ಹಿರಿಯರಿಗೆ ಲಸಿಕೆ ಹಾಕಲು ಆಸ್ಪತ್ರೆಗೆ ಬರಲು ಸಾಧ್ಯವಾಗದ ಹಿನ್ನೆಲೆ ಫಲಾನುಭವಿಗಳಿಗೆ ವಾಹನದ ವ್ಯವಸ್ಥೆ ಮಾಡಲಾಯಿತು.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಮಾಹಿತಿ ನೀಡಿ, ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಕೋವಿಡ್ ಸೋಂಕು ತಡೆಗಟ್ಟಬಹುದು. ಆದರೆ ಕೇವಲ ಲಸಿಕೆ ಹಾಕಿಸಿಕೊಂಡ ಮಾತ್ರಕ್ಕೆ ಕೋವಿಡ್ ಹರಡುವುದಿಲ್ಲ ಎಂದು ಉದಾಸೀನ ಮಾಡಬಾರದು. ಸಾಮಾಜಿಕ ಅಂತರ ಮತ್ತು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವುದ ರಿಂದ ರೋಗ ಹರಡದಂತೆ ತಡೆಗಟ್ಟಬಹುದೆಂದರು. ಕೋವಿಡ್ ಸೋಂಕು ತಡೆಗೆ ಸರಕಾರದ ಜೊತೆಯಲ್ಲಿ ಸಾರ್ವಜನಿಕರು, ಸಂಘ-ಸAಸ್ಥೆಗಳು ಕೈಜೋಡಿಸಬೇಕು. ರೋಟರಿ ಸಂಸ್ಥೆಯು ಕೋವಿಡ್ ಸೋಂಕು ನಿಯಂತ್ರಿಸಲು ಲಸಿಕೆ ಹಾಕಿಸಲು ಬಂದ ಅಸಹಾಯಕರಿಗೆ ವಾಹನದ ವ್ಯವಸ್ಥೆ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು. ರೋಟರಿ ಕಾರ್ಯದರ್ಶಿ ಎ.ಎನ್. ತ್ಯಾಗರಾಜ್ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಸಂಬAಧಪಟ್ಟ ಸೇವೆಯನ್ನು ಮಾಡುತ್ತಿದೆ ಎಂದರು.

ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಎ.ಎಸ್. ರಾಮಣ್ಣ, ನಿಕಟಪೂರ್ವ ಅಧ್ಯಕ್ಷ ಹೆಚ್.ಇ. ತಮ್ಮಯ್ಯ, ಸದಸ್ಯರಾದ ಕಿರಣ್, ಲೋಕೇಶ್, ಆನಂದ್ ಹಾಜರಿದ್ದರು.