ಸುಂಟಿಕೊಪ್ಪ, ಮೇ ೨೯: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರುಗಳು ಕೊರೊನಾ ಸೋಂಕಿತರಿಗೆ ನೆರವು ನೀಡುವ ಸಲುವಾಗಿ ಮಾಸಿಕ ಗೌರವಧನವನ್ನು ನೀಡಿದ್ದಾರೆ.

ಗ್ರಾಮದಲ್ಲಿ ಕಡು ಬಡವರು, ಕೂಲಿ ಕಾರ್ಮಿಕರೇ ಹೆಚ್ಚಾಗಿ ನೆಲೆಸಿದ್ದಾರೆ. ಅವರಿಗೆ ನೆರವಾಗುವ ದಿಸೆಯಲ್ಲಿ ಪಂಚಾಯಿತಿ ಎಲ್ಲಾ ಸದಸ್ಯರುಗಳಿಗೆ ದೊರೆಯುವ ೧ ತಿಂಗಳ ಮಾಸಿಕ ಗೌರವ ಧನವನ್ನು ಕೊರೊನಾ ಸೋಂಕಿತರಿಗೆ ಅಗತ್ಯಕ್ಕೆ ವಿನಿಯೋಗಿಸಲು ನಿರ್ಣಯಿಸಲಾಗಿದೆ. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ರಮೇಶ, ಉಪಾಧ್ಯಕ್ಷ ಸತೀಶ್, ಸದಸ್ಯರುಗಳಾದ ಸುಭಾಷ್, ಜಗನ್ನಾಥ್, ಅರುಣಾಕುಮಾರಿ, ರಾಧಮಣಿ ಸೀತೆ, ಪ್ರೇಮ ಇದ್ದರು