*ಗೋಣಿಕೊಪ್ಪ, ಮೇ ೨೯: ಜನರ ಕೊರೊನಾ ಸಂಕಷ್ಟದ ದಿನಗಳಿಗೆ ಸಹಾಯಹಸ್ತ ಚಾಚುವ ಮೂಲಕ ಜನಸೇವೆಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರುಗಳು ಮುಂದಾಗಿ ಆತಂಕಕಾರಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಸೂಚಿಸಿದರು.
ಅರುವತ್ತೋಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್-೧೯ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಮಹಾಮಾರಿ ಇಡೀ ಪ್ರಪಂಚದ ಜನರ ಬದುಕನ್ನು ಕಸಿದುಕೊಳ್ಳುತ್ತಿದೆ. ಆರ್ಥಿಕವಾಗಿ ಸಂಕಷ್ಟ ದಿನಗಳನ್ನು *ಗೋಣಿಕೊಪ್ಪ, ಮೇ ೨೯: ಜನರ ಕೊರೊನಾ ಸಂಕಷ್ಟದ ದಿನಗಳಿಗೆ ಸಹಾಯಹಸ್ತ ಚಾಚುವ ಮೂಲಕ ಜನಸೇವೆಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರುಗಳು ಮುಂದಾಗಿ ಆತಂಕಕಾರಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಸೂಚಿಸಿದರು.
ಅರುವತ್ತೋಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್-೧೯ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಮಹಾಮಾರಿ ಇಡೀ ಪ್ರಪಂಚದ ಜನರ ಬದುಕನ್ನು ಕಸಿದುಕೊಳ್ಳುತ್ತಿದೆ. ಆರ್ಥಿಕವಾಗಿ ಸಂಕಷ್ಟ ದಿನಗಳನ್ನು ಪಂಚಾಯಿತಿಗಳು ನಿರ್ದಾಕ್ಷೀಣ್ಯ ಕ್ರಮ ಕೈಗೊಂಡು ಉತ್ತಮ ವ್ಯವಸ್ಥೆಗಳನ್ನು ನಿಭಾಯಿಸಿದರೆ ಸಮಸ್ಯೆಯನ್ನು ಹೊಡೆದೊಡಿಸಲು ಸಾಧ್ಯವಿದೆ ಮತ್ತು ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯಿಂದ ಕೊರೊನಾ ನಿಯಂತ್ರಿಸಬಹುದು ಎಂದರು.
ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗನಂದಾ, ಪ್ರೊಬೇಷನರಿ ಕಮಿಷನರ್ ಹಾಗೂ ಪೊನ್ನಂಪೇಟೆ ತಾಲೂಕು ಪ್ರಭಾರ ತಹಶೀಲ್ದಾರ್ ಕಾವ್ಯರಾಣಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್, ತಾಲೂಕು ಪೊಲೀಸ್ ಉಪಾಧ್ಯಕ್ಷ ಜಯಕುಮಾರ್, ಅರುವತ್ತೊಕ್ಲು ಗ್ರಾ.ಪಂ. ಅಧ್ಯಕ್ಷ ಮನೆಯಪಂಡ ಸೋಮಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ನಾರಾಯಣ್, ಬಿಟ್ಟಂಗಾಲ, ಟಿ. ಶೆಟ್ಟಿಗೇರಿ, ಹುದಿಕೇರಿ, ಬಿರುನಾಣಿ, ಬಿ. ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಕೆ. ಬಾಡಗ, ಪೊನ್ನಂಪೇಟೆ, ಕಿರುಗೂರು, ಹಾತೂರು, ಗೋಣಿಕೊಪ್ಪಲು ಭಾಗ ಗಳಲ್ಲಿ ಜಾಗೃತಿ ಸಭೆಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.