ಮಡಿಕೇರಿ, ಮೇ ೨೯: ಮಡಿಕೇರಿಯ ಹಿಂದೂ ರುದ್ರಭೂಮಿಗೆ ಮಡಿಕೇರಿಯ ರಾಜಾಸ್ತಾನ ಸೀರ್ವಿ ಸಮಾಜದ ವತಿಯಿಂದ ಬೋರ್ವೆಲ್ ಸೌಕರ್ಯ ಕಲ್ಪಿಸಲಾಗಿದೆ.
ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಕಳೆದೊಂದು ವರ್ಷದಿಂದ ನಡೆಸಲಾಗುತ್ತಿರುವ ನಗರದ ಹಿಂದೂ ರುದ್ರಭೂಮಿಗೆ ಸೂಕ್ತ ನೀರಿನ ವ್ಯವಸ್ಥೆಯ ಅಗತ್ಯತೆ ಮನಗಂಡು ಮಡಿಕೇರಿಯ ರಾಜಾಸ್ತಾನ ಸೀರ್ವಿ ಸಮಾಜದವರು ಬೋರ್ವೆಲ್ ಅನ್ನು ವ್ಯವಸ್ಥೆ ಮಾಡಿ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಅಂತೆಯೇ ರುದ್ರಭೂಮಿಯಲ್ಲಿ ಶೌಚಾಲಯ, ಸ್ನಾನದ ಕೊಠಡಿಗೆ ಅಗತ್ಯವಾದ ಸಾಮಗ್ರಿಗಳನ್ನೂ ಸಮಾಜದ ವತಿಯಿಂದ ನೀಡಲಾಗುತ್ತದೆ. ಸಮಾಜದಿಂದ ಈ ಎಲ್ಲಾ ಕಾರ್ಯಕ್ಕೆ ರೂ. ೧.೫೦ ಲಕ್ಷ ವಿನಿಯೋಗಿಸಲಾಗಿದೆ ಎಂದು ಸಮಾಜದ ಪರವಾಗಿ ತೇಜ್ರಾಜ್ ತಿಳಿಸಿದ್ದಾರೆ.