ಮಡಿಕೇರಿ, ಮೇ ೨೯: ಮಡಿಕೇರಿ ಹಾಗೂ ವೀರಾಜಪೇಟೆಯ ಮಿಲಿಟರಿ ಕ್ಯಾಂಟೀನ್‌ನಲ್ಲಿ ಇಂದು ಕಾರ್ಡ್ದಾರರಿಗೆ ಸರಕು ವಿತರಣೆ ಕಾರ್ಯ ಸುಸೂತ್ರವಾಗಿ ನಡೆಯಿತು. ನಿನ್ನೆ ಭಾರೀ ಜನಸಂದಣಿಯಿAದ ಉಂಟಾಗಿದ್ದ ಪರಿಸ್ಥಿತಿ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ.

ಜಿಲ್ಲಾಧಿಕಾರಿಗಳ ವಿಶೇಷ ಅನುಮತಿ ಹಾಗೂ ಇದಕ್ಕೆ ಶಾಸಕರು ಆಸಕ್ತಿ ವಹಿಸಿದ್ದರಿಂದ ಇಂದು ಬೆಳಿಗ್ಗೆ ೬ ರಿಂದ ಅಪರಾಹ್ನ ೨ ಗಂಟೆ ತನಕ ಕಾಲಾವಕಾಶ ನೀಡಲಾಗಿತ್ತು. ಇದರಿಂದ ಕೋವಿಡ್ ಮಾರ್ಗಸೂಚಿಯೊಂದಿಗೆ ಮಾಜಿ ಸೈನಿಕರಿಗೆ ಸಾಮಗ್ರಿ ನೀಡಲಾಯಿತು ಎಂದು ಮಡಿಕೇರಿಯ ವ್ಯವಸ್ಥಾಪಕ ನಿವೃತ್ತ ಸುಬೇದಾರ್ ಮುಂಡ್ಯೋಳAಡ ಸುಬ್ಬಯ್ಯ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುಮಾರು ೬೮೦ ಮಂದಿ ಹಾಗೂ ವೀರಾಜಪೇಟೆಯಲ್ಲಿ ೫೦೦ ರಷ್ಟು ಮಂದಿ ಸವಲತ್ತು ಪಡೆದಿದ್ದಾರೆ. ಎನ್‌ಸಿಸಿ ಸಿಬ್ಬಂದಿಗಳು, ಮಡಿಕೇರಿ ಹಾಗೂ ವೀರಾಜಪೇಟೆಯ ಪೊಲೀಸರು ಕ್ಯಾಂಟೀನ್ ಸಿಬ್ಬಂದಿಗಳಿಗೆ ನೆರವಾದರು.