ಸೋಮವಾರಪೇಟೆ, ಮೇ ೨೯: ಸಿನಿಮಾ ನಟರಾದ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಅವರ ಭುವನಂ ಫೌಂಡೇಷನ್ ವತಿಯಿಂದ ಪಟ್ಟಣ ವ್ಯಾಪ್ತಿಯಲ್ಲಿರುವ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ಗಳನ್ನು ಒದಗಿಸಲಾಯಿತು.
ಪಟ್ಟಣ ವ್ಯಾಪ್ತಿಯಲ್ಲಿರುವ ಕೋವಿಡ್ ಸೋಂಕಿತ ಬಡ ಕುಟುಂಬಗಳು, ಕ್ಯಾನ್ಸರ್ ಪೀಡಿತ, ವಿಶೇಷಚೇತನ ಹಾಗೂ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕ ಕುಟುಂಬಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಎಂ.ಎ. ರುಬೀನಾ ಅವರು ಫೌಂಡೇಷನ್ನ ಗಮನಕ್ಕೆ ತಂದ ಹಿನ್ನೆಲೆ, ತಕ್ಷಣ ಸ್ಪಂದಿಸಿದ ಭುವನ್ ಅವರು ಆಹಾರ ಸಾಮಗ್ರಿಗಳ ಕಿಟ್ಗಳನ್ನು ಒದಗಿಸಿದರು.
ಫೌಂಡೇಷನ್ನ ರಾಘವೇಂದ್ರ ಮತ್ತು ಗೌತಮ್ ಅವರುಗಳು ಪಟ್ಟಣಕ್ಕೆ ಆಗಮಿಸಿ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್ ವಿತರಿಸಿದರು. ಈ ಸಂದರ್ಭ ಎಂ.ಎ. ರುಬೀನಾ ಉಪಸ್ಥಿತರಿದ್ದರು.