ಚೆಟ್ಟಳ್ಳಿ, ಮೇ ೨೯: ಕೋವಿಡ್ ಲಾಕ್ಡೌನ್ ಹಿನ್ನೆಲೆ ಅರ್ಚಕರಿಗೆ ರಾಜ್ಯ ಸರ್ಕಾರ ಎರಡು ತಿಂಗಳ ತಸ್ತಿಕ್ ಬಿಡುಗಡೆ ಮಾಡಿರುವುದು ಸಂತೋಷದ ವಿಷಯ. ಆದರೆ ಇತರ ಸಮುದಾಯದವರಿಗೆ ಯಾವುದೇ ಪ್ಯಾಕೇಜ್ ನೀಡಿಲ್ಲ.
ಮುಸ್ಲಿಂ, ಕ್ರೆöÊಸ್ತ, ಜೈನ, ಪಾರ್ಸಿ, ಬುದ್ಧ, ಸಿಖ್ ಹೀಗೆ ಎಲ್ಲಾ ಧಾರ್ಮಿಕ ಕೇಂದ್ರಗಳ ಗುರುಗಳು ಹಾಗೂ ಸಿಬ್ಬಂದಿಯವರು ಸಹ ಕೊರೊನಾ ಸೋಂಕು ನಿಯಂತ್ರಿಸಲು ಘೋಷಿಸಿರುವ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದಾರೆ. ನೋಂದಾಯಿತ ಧರ್ಮಗುರುಗಳಿಗೆ ಹಾಗೂ ಸಿಬ್ಬಂದಿಗಳ ಸಂಕಷ್ಟಕ್ಕೆ ಸ್ಪಂದಿಸಿ ತಕ್ಷಣವೇ ಆರ್ಥಿಕ ನೆರವು ನೀಡಬೇಕೆಂದು ಸರ್ಕಾರವನ್ನು ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಆಗ್ರಹಿಸಿದೆ.
ಸರ್ಕಾರವು ಜಾತ್ಯತೀತವಾಗಿ ಯಾವುದೇ ಜಾತಿ, ಧರ್ಮ, ಪಂಗಡಗಳ ಮಧ್ಯೆ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾಗಿ ಪರಿಹಾರ ಬಿಡುಗಡೆಗೊಳಿಸಿ ಆರ್ಥಿಕ ಸಹಾಯ ನೀಡಬೇಕಾಗಿ ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಆಗ್ರಹಿಸಿದೆ.