ಮಡಿಕೇರಿ, ಮೇ ೨೯: ಕೊಡಗು ಜಿಲ್ಲಾ ಸರ್ವೋದಯ ಸಮಿತಿ ವತಿಯಿಂದ ಹಿರಿಯ ಸ್ವಾತಂತ್ರö್ಯ ಹೋರಾಟಗಾರ ದೊರೆಸ್ವಾಮಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಾಮಾಜಿಕ ಜಾಲತಾಣದ ಮೂಲಕ ನೇರ ಪ್ರಸಾರದಲ್ಲಿ ಸಮಿತಿಯ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಹಿರಿಯ ಸದಸ್ಯ ಟಿ.ಪಿ.ರಮೇಶ್ ಹಾಗೂ ಸದಸ್ಯರುಗಳು ದೊರೆಸ್ವಾಮಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಜಿಲ್ಲೆಯ ವಿವಿಧೆಡೆ ಸ್ವಾತಂತ್ರö್ಯ ಹೋರಾಟಗಾರ ದೊರೆಸ್ವಾಮಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಳ್ಳಿಗಟ್ಟು, ಬಸವನಹಳ್ಳಿ, ಬಾಳುಗೋಡು ಮತ್ತಿತರೆಡೆ ಹಿರಿಯ ಜೀವಕ್ಕೆ ಅನೇಕರು ಕಂಬನಿ ಮಿಡಿದರು. ದುರ್ಬಲ ವರ್ಗದ ಧ್ವನಿಯಾಗಿದ್ದ ದೊರೆಸ್ವಾಮಿ ಅವರಿಗೆ ಹಾಡಿ ನಿವಾಸಿಗಳು ವಿಶಿಷ್ಟ ರೀತಿಯಲ್ಲಿ ಮೊಂಬತ್ತಿ ಬೆಳಗಿ ನಮನ ಸಲ್ಲಿಸಿದರು. ಕೊಡಗು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಪ್ರಮುಖ ಅಮೀನ್ ಮೊಹಿಸಿನ್ ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ. ಹೊದ್ದೂರು ಗ್ರಾ.ಪಂ. ಸದಸ್ಯ ಹಮೀದ್ ಅವರು ಕೂಡ ದೊರೆಸ್ವಾಮಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.