ಕೂಡಿಗೆ, ಮೇ ೨೯: ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಅಣೆಕಟ್ಟೆಯ ಸಮೀಪದ ಒಂದನೆಯ ತೂಬಿನಿಂದ ಮೂರನೇಯ ತೂಬಿನವರೆಗೆ ಹಾರಂಗಿ ಮುಖ್ಯ ನಾಲೆಯ ಉಪ ಕಾಲುವೆಗಳ ಮತ್ತು ರೈತರ ಜಮೀನಿಗೆ ತೆರಳುವ ರಸ್ತೆಯ ಕಾಮಗಾರಿ ಆರಂಭವಾಗಿದೆ.
ಕಳೆದ ವರ್ಷ ಕಾವೇರಿ ನೀರಾವರಿ ನಿಗಮದ ಮೂಲಕ ರೂ. ೬೦ ಲಕ್ಷ ವೆಚ್ಚದ ಟೆಂಡರ್ ಪ್ರಕ್ರಿಯೆಗಳು ನೆಡೆದು ಕಾಮಗಾರಿಯು ಸ್ಥಗಿತಗೊಂಡಿದ್ದÀವು. ರೈತರ ಜಮೀನಿಗೆ ಸರಾಗವಾಗಿ ನೀರು ಹರಿಯಲು ಕಷ್ಟವಾಗುತ್ತಿತು. ರೈತರ ಮನವಿಯ ಮೇರೆಗೆ ಗುತ್ತಿಗೆದಾರ ಕಾಮಗಾರಿಯನ್ನು ಆರಂಭಿಸಿದ್ದಾರೆ. ಇದರಿಂದಾಗಿ ಮುಂದಿನ ಬೇಸಾಯಕ್ಕೆ ಅನುಕೂಲವಾಗುತ್ತದೆ ಎಂದು ಹುದುಗೂರು ಮತ್ತು ಕಾಳಿ ದೇವನ ಹೊಸೂರು ಗ್ರಾಮಸ್ಥರು ತಿಳಿಸಿದ್ದಾರೆ.