ಮಡಿಕೇರಿ, ಮೇ ೨೮: ಕೊಡಗು ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾ ಆಸ್ಪತ್ರೆ ಬಳಿ ಹಸಿದವರಿಗಾಗಿ ‘ನಮ್ಮವರಿಗಾಗಿ ನಾವು’ ಪರಿಕಲ್ಪನೆಯಡಿ ಹಮ್ಮಿಕೊಂಡಿರುವ ಉಚಿತ ಅನ್ನದಾಸೋಹ ಕಾರ್ಯಕ್ರಮಕ್ಕೆ ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಸುನಿಲ್ ಸುಬ್ರಮಣಿ ಅವರುಗಳು ಸಹಕಾರ ನೀಡಿದರು. ಹಸಿದವರ ಊರು, ವಿಳಾಸದ ಬಗ್ಗೆ ವಿಚಾರಿಸುತ್ತಾ ತಾವುಗಳೇ ಸ್ವತಃ ಊಟ ವಿತರಿಸಿದರು. ಅಲ್ಲದೇ, ಊಟದ ಒಂದು ದಿನದ ವೆಚ್ಚವನ್ನು ಕೂಡ ಶಾಸಕ ರಂಜನ್ ನೀಡಿದರಲ್ಲದೆ, ರಕ್ಷಣಾ ವೇದಿಕೆಯ ಅನ್ನದಾಸೋಹ ಕಾರ್ಯವನ್ನು ಶ್ಲಾಘಿಸಿದರು.