(ಮಡಿಕೇರಿ-ವೀರಾಜಪೇಟೆ ನಡುವಿನ ಬೆಸುಗೆಯಾದ ಸೇತುವೆ ನಿರ್ಮಾಣವಾಗಿ ಇಂದಿಗೆ ಆರೂವರೆ ದಶಕ)
ಮಡಿಕೇರಿ-ವೀರಾಜಪೇಟೆ ಮಾರ್ಗದಲ್ಲಿ ಇತಿಹಾಸದ ಹೆಗ್ಗುರುತಾಗಿ ನೆಲೆಗೊಂಡಿರುವ ಬೇತ್ರಿ ಸೇತುವೆ ಯಾರಿಗೆ ಗೊತ್ತಿಲ್ಲ ?
ಮಡಿಕೇರಿ-ಈ ಸೇತುವೆ ಮೇಲೆ ಪ್ರಯಾಣಿಕರು ತೆರಳುತ್ತಿದ್ದರೆ ಭಕ್ತಿಭಾವ ದಿಂದ ಕಾವೇರಿ ತಾಯಿಗೆ ನಮಿಸು ತ್ತಾರೆ. ಕೆಲವರು ತಮ್ಮೊಂದಿಗೆ ತಂದಿ ರುವ ಹೂವನ್ನು ಸೇತುವೆ ಕೆಳಗಡೆ ಹರಿಯುತ್ತಾ ಸಾಗಿರುವ ಪುಣ್ಯ ನದಿಗೆ ಮೇಲಿನಿಂದಲೇ ಸಮರ್ಪಿಸುತ್ತಾರೆ.
ಹೀಗಾಗಿ ಇದು ಕೇವಲ ಕಾಂಕ್ರೀಟ್ ಸೇತುವೆ ಮಾತ್ರವೇ ಅಲ್ಲ. ಇದು ಜನರ ಭಾವನೆಗಳನ್ನು ಬೆಸೆಯುತ್ತಲೇ ಇರುವ ಕೊಡಗಿನ ಹೆಮ್ಮೆಯ ಸೇತುವೆ.. ಈ ಸೇತುವೆಗೆ ಇಂದು ೬೬ ವರ್ಷ ತುಂಬಿದ ಸಂಭ್ರಮ. ಇಂಥ ಹೆಮ್ಮೆಯ ಸಂದರ್ಭ ಒದಗಿರುವುದು ಹಲವರ ಮೆಚ್ಚಿನ ಬೇತ್ರಿ ಸೇತುವೆಗೆ.
ಮಡಿಕೇರಿ-ವೀರಾಜಪೇಟೆ ನಡುವಿನ ಪ್ರಯಾಣಿಕರ ಸಂಪರ್ಕ ಸೇತುವೆಯೇ ಈ ಐತಿಹಾಸಿಕ ಸೇತುವೆ. ಕನ್ನಡನಾಡಿನ ಪುಣ್ಯ ನದಿ ಕಾವೇರಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬೇತ್ರಿ ಸೇತುವೆ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕನ್ನು ಸಂಪರ್ಕಕ್ಕಾಗಿ ಬೆಸೆಯುವ ಸೇತು ಕೂಡ ಹೌದು.
ಬೇತ್ರಿ ಸೇತುವೆಗೆ ಶಿಲಾನ್ಯಾಸವನ್ನು ೧೯೫೩ ರ ಮೇ ೨೮ ರಂದು ಮಾಡಲಾಗಿತ್ತು. ಅಂದು ಸಿ ಸ್ಟೇಟ್ ಆಗಿದ್ದ ಕೊಡಗಿನ ಛೀಫ್ ಕಮೀಷನರ್ ಆಗಿದ್ದ ಕರ್ನಲ್ ಬಿ. ಎಸ್. ಬೇಡಿ ಕೇಂದ್ರ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ನಿರ್ಮಿಸಲ್ಪಟ್ಟ ಈ ಸೇತುವೆಯ ಶಿಲಾನ್ಯಾಸ ನೆರವೇರಿಸಿದ್ದರು.
ಕೇವಲ ಎರಡೇ ಎರಡು ವರ್ಷಗಳಲ್ಲಿ ನಿರ್ಮಾಣಗೊಂಡ ಬೇತ್ರಿ ಸೇತುವೆಯನ್ನು ಭಾರತ ಸರ್ಕಾರದಲ್ಲಿ ಅಂದು ಸಾರಿಗೆ ಮತ್ತು ರೈಲ್ವೆ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತಿç ಅವರು ೧೯೫೫ರ ಮೇ ೨೯ ರಂದು ಅಧಿಕೃತವಾಗಿ ಉದ್ಘಾಟಿಸಿದ್ದರು. ಈಗಲೂ ಕೊಡಗಿನ ಸುಭದ್ರ ಸೇತುವೆಗಳಲ್ಲಿ ಬೇತ್ರಿ ಸೇತುವೆ ಒಂದಾಗಿದೆ ಎಂದರೆ ಅಂದಿನ ಕಾಲದ ಕಾಮಗಾರಿಯ ಗುಣಮಟ್ಟವನ್ನು ಊಹಿಸಬಹುದು.
ಅಂದಿನ ಕೇಂದ್ರ ಸರ್ಕಾರದಲ್ಲಿ ಸಾರಿಗೆ ಮತ್ತು ರೈಲ್ವೇ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತಿç ಬೇತ್ರಿ ಗ್ರಾಮದ ಕಂಬೀರAಡ ಕುಟುಂಬದ ಐನ್ಮನೆಗೆ ಬಂದು ಕೊಡಗಿನ ಕಾಫಿಯನ್ನು ಸವಿದಿದ್ದರು ಎಂದು ನಿವೃತ್ತ ಶಿಕ್ಷಕರಾದ ಕಂಬೀರAಡ ಕಾಳಪ್ಪ ನೆನಪಿಸಿಕೊಳ್ಳುತ್ತಾರೆ. ಕೊಡಗಿನ ಖ್ಯಾತ ಮನೆತನಗಳಲ್ಲೊಂದಾದ ಅಪ್ಪಾರಂಡ ತಿಮ್ಮಯ್ಯನವರ ಮರ್ಸಿಡೀಜ್ ಬೆಂಜ್ ಕಾರಿನಲ್ಲಿ ಕುಳಿತು ಶಾಸ್ತಿçÃಜಿ ಬೇತ್ರಿ ಸೇತುವೆ ಉದ್ಘಾಟನೆಗೆ ಆಗಮಿಸಿದ್ದರು. ಹೀಗಾಗಿ ಮರ್ಸಿಡೀಸ್ ಬೆಂಜ್ ಬೇತ್ರಿ ಸೇತುವೆ ಮೇಲೆ ಅಧಿಕೃತವಾಗಿ ಸಂಚರಿಸಿದ ಮೊದಲ ಕಾರ್ ಎಂಬ ಹಿರಿಮೆ ಹೊಂದಿದೆ.
ಸೇತುವೆ ಉದ್ಘಾಟನೆ ಸಂದರ್ಭ ಕುಂಬೇರ ಲಾಲಿ ಪೊನ್ನಮ್ಮ, ಪಾಂಡ್ಯAಡ ಸರೋಜಿನಿ ಅವರು ‘‘ನೋಡು ಕುಣಿದು ಬರುತಲಿರುವಳು ಕೊಡಗು ಕನ್ನಿ ಕಾವೇರಿ’’ ಎಂಬ ಗೀತೆಯನ್ನು ಹಾಡಿದ್ದನ್ನು ಕುಂಬೇರ ಸುಬ್ಬಯ್ಯ ಸ್ಮರಿಸಿಕೊಳ್ಳುತ್ತಾರೆ. ಬೇತ್ರಿಗೆ ಲಾಲ್ಬಹದ್ದೂರ್ ಶಾಸ್ತಿçà ಆಗಮಿಸುವ ಮುನ್ನ ಮಡಿಕೇರಿಯಲ್ಲಿ ಅವರನ್ನು ಟೋಲ್ಗೇಟ್ನಲ್ಲಿ ಸ್ಥಳೀಯರು ಸ್ವಾಗತಿಸಿದರು. ಜತೆಗೆ ‘‘ಭಾರತ್ ಮಾತಾಕೀ ಜೈ’’ ಎಂಬ ಘೋಷಣೆ ಕೂಡ ಕೂಗಿದ್ದರಂತೆ. ಕಳೆದ ಆರೂವರೆ ದಶಕಗಳಲ್ಲಿ ಬೇತ್ರಿ ಸೇತುವೆ ಕೊಡಗಿನ ಇತಿಹಾಸದ ಭಾಗವೇ ಆಗಿಹೋಗಿದ್ದು ಮುಂಗಾರಿನಲ್ಲAತೂ ಬೇತ್ರಿ ರುದ್ರ ರಮಣೀಯತೆಗೆ ಸಾಕ್ಷಿಯಾಗಿದೆ. ಕಾವೇರಿ ನದಿಯಲ್ಲಿ ಮಹಾಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ನದಿ ನೀರು ಮೇಲೆ ಬಂದು ಬೇತ್ರಿಯಂಥ ಬೇತ್ರಿ ಸೇತುವೆಯೇ ಮುಳುಗಿಹೋದರೆ ಕೊಡಗಿನಲ್ಲಿ ಅದು ಮಳೆಯ ದುರಂತಕ್ಕೆ ಸಾಕ್ಷಿಯಾದಂತೆ. ಬೇತ್ರಿಯಲ್ಲಿ ನೀರು ಎಷ್ಟು ಬಂದಿದೆ ಎಂದು ಪ್ರಶ್ನಿಸಿಯೇ ಹಳಬ್ಬರು ಕೊಡಗಿನ ಮಳೆ ಪ್ರಮಾಣ ಅಳೆಯುವುದು ಈಗಲೂ ಮುಂದುವರೆದಿದೆ.
ಬೇತ್ರಿ ಸೇತುವೆಯಿಂದ ನದಿಗೆ ಜಿಗಿದು ಅನೇಕರು ಆತ್ಮಹತ್ಯೆ ಮಾಡಿಕೊಂಡ ಘಟನೆಗೂ ಸೇತುವೆ ಸಾಕ್ಷಿಯಾಗಿದೆ. ಕೆಲವೊಂದು ವಾಹನಗಳೂ ಸೇತುವೆಯಿಂದ ಆಕಸ್ಮಿಕವಾಗಿ ಕೆಳಕ್ಕೆ ಉರುಳಿದ ದುರಂತವೂ ಈ ಮಹಾಸೇತುವೆಯಲ್ಲಿ ಸಂಭವಿಸಿದೆ.
ಸೇತುವೆ ಪಕ್ಕದಲ್ಲಿಯೇ ಹೊಟೇಲ್, ದಿನಸಿ ಅಂಗಡಿಗಳು ಸೇತುವೆ ಮೇಲಿನಿಂದ ಕಾವೇರಿ ನದಿಯನ್ನು ವೀಕ್ಷಿಸಲು ಬರುವವರಿಗೆ ಉಪಕಾರಿ ಯಾಗಿದೆ. ಬೇತ್ರಿ ಎಂಬ ಗ್ರಾಮದ ಹೆಮ್ಮೆಯಾಗಿಯೂ ಈ ಸೇತುವೆ ಕಂಗೊಳಿಸಿದೆ. ಸೂರ್ಯಸ್ತಮಾನದ ಸೊಬಗು ವೀಕ್ಷಿಸಲೆಂದೇ ಅನೇಕರು ಇಲ್ಲಿಗೆ ಬರುವುದಿದೆ.
ವರ್ಷ ೬೬ ಆದರೂ ಕುಗ್ಗದ, ಜಗ್ಗದ ಭದ್ರ ಬೆಸುಗೆಯಿಂದ ಬಿಗಿಯಲಾದ ಬೇತ್ರಿ ಸೇತುವೆ ಇನ್ನೂ ಅರ್ಧ ಶತಮಾನವಾದರೂ ಭದ್ರವಾಗಿಯೇ ಇರುತ್ತದೆ ಎಂಬ ನಂಬಿಕೆಯಿದೆ. ಹೊಸ ಸೇತುವೆಯನ್ನು ಬೇತ್ರಿ ಪಕ್ಕದಲ್ಲಿ ನಿರ್ಮಿಸ ಬೇಕೆಂಬ ಪ್ರಸ್ತಾವನೆ ಇತ್ತಾದರೂ ಅದಕ್ಕಿನ್ನೂ ಜೀವ ಬಂದಿಲ್ಲ.
ಕೊಡಗಿನ ಐತಿಹಾಸಿಕ ಪ್ರತೀಕವಾಗಿ ಗಮನ ಸೆಳೆಯುತ್ತಿರುವ ಬೇತ್ರಿ ಸೇತುವೆ ನಿರ್ಮಾಣವಾಗಿ ೬೬ ವರ್ಷಗಳಾದ ಈ ಸಂದರ್ಭ ಬೇತ್ರಿ ಸೇತುವೆಯ ಅಭಿಮಾನಿಗಳು, ಮಡಿಕೇರಿ-ವೀರಾಜಪೇಟೆ ಮಾರ್ಗದ ಪ್ರಯಾಣಿಕರ ಪರವಾಗಿ ಸೇತುವೆಗೆ ಶುಭಾಶಯಗಳು. ಸೇತುವೆ ಕಟ್ಟಿದ ಕಲ್ಲಿಗೆ ಜೀವ ಇಲ್ಲದಿರಬಹುದು. ಆದರೆ ನಿತ್ಯನೂತನವಾಗಿ ಕಂಗೊಳಿಸುತ್ತಿರುವ ಬೇತ್ರಿ ಸೇತುವೆಗೆ ಜೀವಂತಿಕೆ ಇದ್ದೇ ಇದೆ.
- ಅನಿಲ್ ಎಚ್.ಟಿ./ಕಿಗ್ಗಾಲು ಹರೀಶ್