ಚೆಟ್ಟಳ್ಳಿ, ಮೇ ೨೮: ಕಳೆದ ಎರಡು - ಮೂರು ವರ್ಷಗಳಿಂದ ಬಲು ಬೇಡಿಕೆಯಾಗುತ್ತಿದ್ದ ಬಟರ್‌ಫ್ರೂಟ್ ಹಣ್ಣಿಗೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲೂ ಮಾರಾಟವಾಗದೆ ಬೆಳೆಗಾರರು ನಷ್ಟ ಅನುವಿಸುತ್ತಿದ್ದರೆ ಬಟರ್ ಫ್ರೂಟ್ ಹಣ್ಣಿನ ಬೀಜಕ್ಕೆ ಮಾತ್ರ ಈ ಬಾರಿ ಡಿಮಾಂಡೋ.. ಡಿಮಾಂಡ್..

ಬೆಣ್ಣೆಹಣ್ಣು, ಬಟರ್‌ಫ್ರೂಟ್ ಆಂಗ್ಲಭಾಷೆಯಲ್ಲಿ ಅವಕಾಡೋ ಎಂದು ಕರೆಯಲ್ಪಡುವ ಹಣ್ಣಿನ ಗಿಡಗಳು ಕೊಡಗಿನ ಹವಾಮಾನಕ್ಕೆ ಉತ್ತಮ ಫಸಲನ್ನು ನೀಡುತ್ತವೆ. ಕೊಡಗಿನವರಲ್ಲದೆ ವಿದೇಶಗಳಲ್ಲಿ ಹಾಗೂ ಹಲವು ರಾಜ್ಯಗಳಲ್ಲೂ ಈ ಬಟರ್‌ಫ್ರೂಟ್ ಹಣ್ಣಿನ ಗಿಡಗಳನ್ನು ಬೆಳೆದು ಆದಾಯ ಪಡೆಯಲಾಗುತ್ತದೆ. ಈ ಸಮಯದಲ್ಲಿ ಹಣ್ಣುಗಳು ಬಿಡತೊಡಗಿ ಚೆಟ್ಟಳ್ಳಿ, ಮೇ ೨೮: ಕಳೆದ ಎರಡು - ಮೂರು ವರ್ಷಗಳಿಂದ ಬಲು ಬೇಡಿಕೆಯಾಗುತ್ತಿದ್ದ ಬಟರ್‌ಫ್ರೂಟ್ ಹಣ್ಣಿಗೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲೂ ಮಾರಾಟವಾಗದೆ ಬೆಳೆಗಾರರು ನಷ್ಟ ಅನುವಿಸುತ್ತಿದ್ದರೆ ಬಟರ್ ಫ್ರೂಟ್ ಹಣ್ಣಿನ ಬೀಜಕ್ಕೆ ಮಾತ್ರ ಈ ಬಾರಿ ಡಿಮಾಂಡೋ.. ಡಿಮಾಂಡ್..

ಬೆಣ್ಣೆಹಣ್ಣು, ಬಟರ್‌ಫ್ರೂಟ್ ಆಂಗ್ಲಭಾಷೆಯಲ್ಲಿ ಅವಕಾಡೋ ಎಂದು ಕರೆಯಲ್ಪಡುವ ಹಣ್ಣಿನ ಗಿಡಗಳು ಕೊಡಗಿನ ಹವಾಮಾನಕ್ಕೆ ಉತ್ತಮ ಫಸಲನ್ನು ನೀಡುತ್ತವೆ. ಕೊಡಗಿನವರಲ್ಲದೆ ವಿದೇಶಗಳಲ್ಲಿ ಹಾಗೂ ಹಲವು ರಾಜ್ಯಗಳಲ್ಲೂ ಈ ಬಟರ್‌ಫ್ರೂಟ್ ಹಣ್ಣಿನ ಗಿಡಗಳನ್ನು ಬೆಳೆದು ಆದಾಯ ಪಡೆಯಲಾಗುತ್ತದೆ. ಈ ಸಮಯದಲ್ಲಿ ಹಣ್ಣುಗಳು ಬಿಡತೊಡಗಿ ಕಾರ್ಮಿಕರು ಕೂಡ ಹಣ್ಣಿನ ಬೀಜವನ್ನು ಹೆಕ್ಕಿತಂದು ನರ್ಸರಿ ಮಾಲೀಕರಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ.

ಬೆಳೆದ ಹಣ್ಣುಗಳನ್ನು ತಂದು ಎರಡುದಿನ ಇಟ್ಟಾಗ ಅರ್ಧ ಹಣ್ಣಾಗುತ್ತದೆ. ಅದರಿಂದ ಬೀಜವನ್ನು ತೆಗೆದು ಬೆವೆಸ್ಟಿನ್ ಕಲಸಿದ ನೀರಿಗೆ ಹಾಕಿ ಇಡುತ್ತಾರೆ. ಅದರ ಸಿಪ್ಪೆ ತೆಗೆದು ಅದನ್ನು ಮಣ್ಣು ತುಂಬಿದ ಬಾಸ್ಕೆಟ್ಟಿಗೆ ಹಾಕುತ್ತಾರೆ. ಮೊಳಕೆ ಒಡೆದು ಗಿಡವಾಗಿ ಬೆಳೆದ ನಂತರ ಅದನ್ನು ಕಸಿಕಟ್ಟುತ್ತಾರೆ. ಗಿಡ ಬೆಳೆದ ನಂತರ ಮಾರಾಟಕ್ಕೆ ಸಿದ್ಧವಾಗುತ್ತದೆೆ.

ವ್ಯಾಪಾರಸ್ಥರ ನಂಬಿಕೆ : ಕಳೆದ ಬಾರಿ ಕೊಡಗಿನ ಹೆಚ್ಚಿನ ನರ್ಸರಿ ಮಾಲೀಕರು ಬಟರ್ ಫ್ರೂಟ್ ಹಣ್ಣಿನ ಗಿಡವನ್ನು ಬೆಳೆದ ಫಲವಾಗಿ ಪಕ್ಕದ ಜಿಲ್ಲೆ ಹಾಗೂ ರಾಜ್ಯಗಳಿಗೆ ಮಾರಿ ಲಕ್ಷಾನುಗಟ್ಟಲೆ ಹಣಗಳಿಸಿದರು. ಈ ಬಾರಿಯೂ ಮಳೆ ಪ್ರಾರಂಭಿಕ ಮುಂಚಿತವಾಗಿ ನರ್ಸರಿ ಮಾಲೀಕರು ಬೀಜಗಳನ್ನು ತಂದು ಗಿಡವಾಗಿಸಿ ಪ್ರತಿ ಗಿಡಕ್ಕೆ ರೂ. ೮೦ರಿಂದ ೧೫೦ ಮಾರಾಟ ಮಾಡಲು ಸಿದ್ಧರಾಗುತ್ತಿದ್ದಾರೆ. (ಮೊದಲ ಪುಟದಿಂದ) ಈ ಬಾರಿ ಲಾಕ್‌ಡೌನ್ ಹೀಗೆ ಮುಂದುವರಿದರೆ ಖರೀದಿಸುವರು ಮುಂದೆ ಬರುವರೇ?

ಕೊಳೆತು ರಾಶಿಯಾಗುತ್ತಿರುವ ಹಣ್ಣುಗಳು

ಎಲ್ಲೂ ಮಾರುಕಟ್ಟೆಯೂ ಇಲ್ಲ, ಖರೀದಿಸುವವರಿಲ್ಲದೆ ಹಲವು ರಾಜ್ಯಗಳಲ್ಲಿ ಟೊಮೆಟೊ, ದಾಕ್ಷಿ, ಕಲ್ಲಂಗಡಿ ಹಣ್ಣುಗಳನ್ನು ಬೀದಿಗೆ ಸುರಿದಂತೆ ಕೊಡಗಿನಲ್ಲಿ ಫಸಲಿಗೆ ಬರುತ್ತಿರುವ ಬಟರ್‌ಫ್ರೂಟ್ ಹಣ್ಣುಗಳು ಮುಂದಿನ ತಿಂಗಳು ಮಳೆಗಾಲ ಪ್ರಾರಂಭವಾದೊಡನೆ ಉದುರಿ ಬೀಳುವ ಜೊತೆಗೆ ಬೇರೆ ಹಣ್ಣುಗಳಂತೆ ಹೆಚ್ಚು ದಿನ ಸಂಗ್ರಹಿಸಿ ಇಡಲಾಗದೆ ಕೊಳೆತು ಹೋಗುತ್ತದೆ. ನರ್ಸರಿಯವರು ಹಣ್ಣುಗಳನ್ನು ತಂದು ಬೀಜವನ್ನು ಬೇರ್ಪಡಿಸಿ ಉಳಿದ ಹಣ್ಣನ್ನು ಬಿಸಾಡುತ್ತಿರುವರುವುದರಿಂದ ಬಟರ್‌ಫ್ರೂಟ್ ಹಣ್ಣುಗಳು ರಾಶಿಗಟ್ಟಲೆ ಕೊಳೆಯುತ್ತಿದೆ. -ವರದಿ -ಪುತ್ತರಿರ ಕರುಣ್ ಕಾಳಯ್ಯ