ಮಡಿಕೇರಿ, ಮೇ ೨೮: ಮಡಿಕೇರಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಸಂಬAಧಿಸಿದAತೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸುವ ಮಾರ್ಗದರ್ಶನ ದಂತೆ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಮಡಿಕೇರಿ ನಗರಸಭೆಗೆ ಸೂಚನೆ ನೀಡಿದೆ.
ಮಡಿಕೇರಿ ನಗರ ಹಾಗೂ ಸುತ್ತಮುತ್ತಲಿನ ಕಸ ತ್ಯಾಜ್ಯಗಳನ್ನು ಸ್ಟೋನ್ ಹಿಲ್ ಬಳಿಯ ಬೆಟ್ಟದ ಪ್ರದೇಶದಲ್ಲಿ ಸುರಿಯಲಾಗುತ್ತಿದ್ದು, ಇದು ಅವೈಜ್ಞಾನಿಕವಾಗಿದೆ. ಅಲ್ಲದೆ ಇದರಿಂದ ಸಮಸ್ಯೆ ಉಂಟಾಗಿದ್ದು, ಶಾಶ್ವತ ಪರಿಹಾರ ಒದಗಿಸುವಂತೆ ಕೋರಿ ನಗರದ ನಾಲ್ಕು ಬಡಾವಣೆಗಳ ನಿವಾಸಿಗಳು ಎಸ್ಆರ್ವಿಕೆ ಹೆಸರಿನಲ್ಲಿ ಸಂಘವನ್ನು ರಚಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರ ವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಈ ಸಂಬAಧ ಗುರುತಿಸಲಾಗಿರುವ ಜಾಗದ ರಕ್ಷಣೆ ಯೊಂದಿಗೆ ಸ್ಟೋನ್ ಹಿಲ್ ಬಳಿ ಸುರಿದಿರುವ ಕಸವನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ನಗರಸಭೆಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ಹಾಗೂ ಈ ಬಗ್ಗೆ ಗಮನಹರಿಸಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿತ್ತು. ಈ ಬಗ್ಗೆ ಕಳೆದ ತಾ. ೨೪ ರಂದು ವಿಚಾರಣೆ ಕೈಗೆತ್ತಿಕೊಂಡ ಸಂದರ್ಭ ಕೋವಿಡ್ ಹಿನ್ನೆಲೆ ಕಾರ್ಮಿಕರು ಲಭ್ಯವಿಲ್ಲದ ಕಾರಣ ಕೆಲಸ ಮಾಡಲಾಗುತ್ತಿಲ್ಲ, ಅಲ್ಲದೆ, ಇದೀಗ ಸ್ಟೋನ್ ಹಿಲ್ನಲ್ಲಿ ಕಸಗಳನ್ನು ಹಾಕುತ್ತಿಲ್ಲ ಎಂದು ನಗರಸಭೆ ವಕೀಲರು ವರದಿ ಸಲ್ಲಿಸಿದರು. ಇದು ಸುಳ್ಳು ಮಾಹಿತಿ ಎಂದು ಅರ್ಜಿದಾರರ ಪರ ವಕೀಲ ಅನುಚೆಂಗಪ್ಪ ಅವರು ನ್ಯಾಯಾಲಯದ ಗಮನಕ್ಕೆ ತಂದ ಸಂದರ್ಭ ಪರಿಗಣಿಸಿದ ಹಿರಿಯ ನ್ಯಾಯಾಧೀಶರಾದ ಭಯ್ ಶ್ರೀನಿವಾಸ್ ಒಕ ಹಾಗೂ ಸೂರಜ್ ಗೋವಿಂದ ರಾಜ್ ಅವರುಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗದರ್ಶನದೊಂದಿಗೆ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದರು. ಅಲ್ಲದೆ, ಈ ಸಂಬAಧ ವಿಚಾರಣೆಯನ್ನು ಮುಂದಿನ ಜೂನ್ ೪ಕ್ಕೆ ಕಾಯ್ದಿರಿಸಿದ್ದಾರೆ.
-ಸಂತೋಷ್