ಮಡಿಕೇರಿ, ಮೇ ೨೮: ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ-೩.೦ ರಡಿಯಲ್ಲಿ ಆರೋಗ್ಯ ಸೇವೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಒಂದು ತಿಂಗಳವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ/ ಸಮುದಾಯ ಆರೋಗ್ಯ ಕೇಂದ್ರ/ ಸಾರ್ವಜನಿಕ ಆಸ್ಪತ್ರೆ/ ಜಿಲ್ಲಾಆಸ್ಪತ್ರೆಗಳಲ್ಲಿ ತರಬೇತಿ ಆಯೋಜಿಸಲಾಗಿದೆ.

ಆಸಕ್ತಿ ಹೊಂದಿರುವ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ (ವಿಜ್ಞಾನ) ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ತಾ. ೩೧ ರೊಳಗೆ hಣಣಠಿs://ಣiಟಿಥಿuಡಿಟ.ಛಿom/೨ಚಿ೫೬ಜ೭vಡಿ ಗೂಗಲ್‌ಲಿಂಕ್ ಮೂಲಕ ಹಾಗೂ ತಮ್ಮ ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಅನ್ನು ಸ್ಕಾö್ಯನ್ ಮಾಡುವ ಮೂಲಕ ತರಬೇತಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಸಿಬ್ಬಂದಿಗಳಾದ ಸುಧಾಕರ್ ಮೊ. ೯೭೪೧೫೫೬೦೩೬, ರವಿಕುಮಾರ್ ಮೊ. ೯೭೩೮೩೬೧೫೦೨ ಹಾಗೂ ವಿರೇಶ್ ಜೆ. ಅಲ್ಲದ್ ಮೊ. ೭೨೦೪೮೫೩೮೭೬, ಹಾಗೂ ಕಚೇರಿಯ ಇ-ಮೇಲ್ ವಿಳಾಸ:ಜsಜoಞoಜಚಿgu೨೦೨೦@gmಚಿiಟ.ಛಿom ಅನ್ನು ಸಂಪರ್ಕಿಸಬಹುದಾಗಿದೆ.